ಚಾಮರಾಜನಗರ: ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯನ್ನು ಸೆರೆ ಹಿಡಿದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಆರೈಕೆಗಾಗಿ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‍ಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುಮಾರು 4 ರಿಂದ 5 ವರ್ಷದ ಹುಲಿಯನ್ನು ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದ ನಾಯಳ್ಳಗಸ್ತಿನ ಸುತ್ತನಹಳ್ಳ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಬೇರೊಂದು ಹುಲಿಯ ಜೊತೆ ಕಾದಾಟ ನಡೆಸಿ ಮುಂಭಾಗದ ಎಡಗಾಲು ಹಾಗೂ ಕಣ್ಣಿನ ಭಾಗದಲ್ಲಿ ಗಾಯಗಳಾಗಿರುವುದನ್ನು ಗುರುವಾರ ಗಮನಿಸಿದ ಗುಂಡ್ರೆ ವಲಯದ ಸಿಬ್ಬಂದಿ ಹುಲಿ ಮೇಲೆ ನಿಗಾ ಇಟ್ಟಿದ್ದರು.