ಕೊಳ್ಳೇಗಾಲ(ಚಾಮರಾಜನಗರ): ಕಾರು ಅಡ್ಡಗಟ್ಟಿ ಅದರಲ್ಲಿದ್ದವರನ್ನ ಸುಲಿಗೆಮಾಡಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಹೆಡೆಮುರಿಕಟ್ಟುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಭರತ್ ಅಲಿಯಾಸ್ ಹುಳಿಮಾವು, ಹನುಮೇಗೌಡ, ಕಿರಣ್, ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಕಳೆದ ತಿಂಗಳು ಕಾರು ಅಡ್ಡಗಟ್ಟಿ ಕಾರಿನಲ್ಲಿದ್ದವರ ಹಣ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ತಮಿಳುನಾಡು ಮೂಲದ ಶಿವು ಹಾಗೂ ಸ್ನೇಹಿತ ದಿನೇಶ್ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಮಧುವನಹಳ್ಳಿಯ ಮುಖ್ಯ ರಸ್ತೆಯ ಬಳಿ, ಕಾರಿನಲ್ಲಿ ಬಂದ ಆರೋಪಿಗಳು ಶಿವು ಹಾಗೂ ದಿನೇಶ್ ಅವರ ಕಾರು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು.