ಕರ್ನಾಟಕ

karnataka

ETV Bharat / state

ಅಪಘಾತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ: ಯಳಂದೂರಿನ ನಾಲ್ವರು ಪೊಲೀಸರ ಅಮಾನತು - ಅಪಘಾತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಯಳಂದೂರಿನ ನಾಲ್ವರು ಪೊಲೀಸರು ಅಮಾನತು

ಮೇಲ್ನೋಟಕ್ಕೆ ಕರ್ತವ್ಯ ಲೋಪ, ಅಶಿಸ್ತು, ದುರ್ನಡತೆ ಹಾಗೂ ಬೇಜವಾಬ್ದಾರಿತನ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ‌.ಪಿ‌.ಶಿವಕುಮಾರ್ ಯಳಂದೂರು ಠಾಣೆಯ ನಾಲ್ವರು ಸಿಬ್ಬಂದಿಯನ್ನ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಯಳಂದೂರಿನ ನಾಲ್ವರು ಪೊಲೀಸರು ಅಮಾನತು
ಯಳಂದೂರಿನ ನಾಲ್ವರು ಪೊಲೀಸರು ಅಮಾನತು

By

Published : Feb 26, 2022, 9:01 PM IST

ಚಾಮರಾಜನಗರ:ಅಪಘಾತ ಪ್ರಕರಣವನ್ನೇ ತಿರುಗು ಮುರುಗು ಮಾಡಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಯಳಂದೂರು ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ‌.

ಎಎಸ್ಐಗಳಾದ ಮಧುಕರ್, ನಾಗರಾಜು ಹಾಗೂ ಕಾನ್ಸ್‌ಟೇಬಲ್​​​ಗಳಾದ ಗೋಪಾಲ್, ಪರಶಿವಮೂರ್ತಿ ಅಮಾನತುಗೊಂಡವರು. ಅಪಘಾತ ಪ್ರಕರಣವೊಂದರಲ್ಲಿ ಗಾಯಾಳು ನೀಡಿದ ಆರೋಪಿ ವಿವರವನ್ನು ಉಲ್ಟಾ ಮಾಡಿದ ಇವರುಗಳು ಚಾಲಕನ ಹೆಸರನ್ನೇ ಬದಲಾಯಿಸಿದ್ದಾರೆ ಎಂದು ಗಾಯಾಳು ತಂದೆ ಅಂಬಳೆ ಗ್ರಾಮದ ಡಾ.ಲಿಂಗರಾಜು ದೂರಿದ್ದರು.

ಮೇಲ್ನೋಟಕ್ಕೆ ಕರ್ತವ್ಯ ಲೋಪ, ಅಶಿಸ್ತು, ದುರ್ನಡತೆ ಹಾಗೂ ಬೇಜವಾಬ್ದಾರಿತನ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ‌.ಪಿ‌.ಶಿವಕುಮಾರ್ ನಾಲ್ವರನ್ನೂ ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ABOUT THE AUTHOR

...view details