ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ಭೀಕರ ರಸ್ತೆ ಅಪಘಾತ: ದಂಪತಿ, ಇಬ್ಬರು ಮಕ್ಕಳು ದಾರುಣ ಸಾವು - ದಂಪತಿ ಮಗು ಸಾವು

ಸಂಕ್ರಾಂತಿ ಹಬ್ಬದ ದಿನದಂದೇ ಚಾಮರಾಜನಗರದ ಕೊಳ್ಳೇಗಾಲದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತೊಂದು ಅಪಘಾತದಲ್ಲಿ ಬೈಕ್​ ಸವಾರರಿಬ್ಬರು ಮೃತಪಟ್ಟ ಘಟನೆ ಹನೂರು ತಾಲೂಕಿನ ದೊಡ್ಡಲಾತ್ತೂರು ಬಳಿ ಸಂಭವಿಸಿದೆ.

same family died  terrible road accident  ದಂಪತಿ ಮಗು ಸಾವು  ಕೊಳ್ಳೇಗಾಲದಲ್ಲಿ ಅಪಘಾತ
ಸಂಕ್ರಾಂತಿ ಹಬ್ಬಕ್ಕೆ ಬಟ್ಟೆ ತರಲು ತೆರಳುತ್ತಿದ್ದ ದಂಪತಿ

By ETV Bharat Karnataka Team

Published : Jan 15, 2024, 12:35 PM IST

Updated : Jan 15, 2024, 7:35 PM IST

ಚಾಮರಾಜನಗರ: ಸಂಕ್ರಾಂತಿ ಹಬ್ಬದಂದೇ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಕೊಳ್ಳೆಗಾಲದಲ್ಲಿ ಇಂದು ನಡೆಯಿತು. ಮೃತರನ್ನು ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಸಂತೋಷ (37), ಸೌಮ್ಯ (27) ಹಾಗು ಮಕ್ಕಳಾದ ಸಾಕ್ಷಿ (4), ಅಭಿ (9) ಎಂದು ಗುರುತಿಸಲಾಗಿದೆ.

ಕೊಳ್ಳೇಗಾಲದಲ್ಲಿ ಅಪಘಾತ

ಘಟನೆಯ ವಿವರ:ಹಬ್ಬಕ್ಕೆ ಬಟ್ಟೆ ಖರೀಸಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕ್​ನಲ್ಲಿ ತೆರಳುತ್ತಿದ್ದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರಕ್ಕೆ ಇವರು ಪ್ರಯಾಣಿಸುತ್ತಿದ್ದ ಬೈಕ್​ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್​ನಿಂದ ನಾಲ್ವರೂ ಕೆಳಕ್ಕೆ ಬಿದ್ದಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟರು. ಇನ್ನೊಂದು ಮಗು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಬೈಕ್​ ಅಪಘಾತ

ಬೈಕ್​ ಅಪಘಾತದಲ್ಲಿ ಇಬ್ಬರು ಮೃತ:ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಯುವಕನೋರ್ವ ಗಾಯಗೊಂಡ ಘಟನೆ ಹನೂರು ತಾಲೂಕಿನ ದೊಡ್ಡಲಾತ್ತೂರು ಬಳಿ ಸೋಮವಾರ ಸಂಜೆ ಸಂಭವಿಸಿದೆ. ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದ ಶರತ್ (22) ಹಾಗೂ ಕೆಂಪನಟ್ಟಿ ಗ್ರಾಮದ ಮದನ್ ಕುಮಾರ್ ಮೃತರು. ಪುದುರಾಮಪುರ ಗ್ರಾಮದ ಕುಮಾರ್ ಎಂಬಾತ‌ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಮಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕ್ರಮ‌ ಕೈಗೊಂಡಿದ್ದಾರೆ.

ಇದನ್ನೂ ಓದಿ:ಆಧಾರ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಮುಖಕ್ಕೆ ಪರಚಿದ ಮಹಿಳೆ

Last Updated : Jan 15, 2024, 7:35 PM IST

ABOUT THE AUTHOR

...view details