ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯರನ್ನು ಪ್ರಶ್ನಿಸುವ ನೈತಿಕತೆ ಎನ್‌. ಮಹೇಶ್ ಅವರಿಗಿಲ್ಲ : ಮಾಜಿ ಸಂಸದ ಆರ್‌ ಧ್ರುವನಾರಾಯಣ್​ - block congress activists meeting

ಸಿದ್ದರಾಮಯ್ಯ ಚಾಮರಾಜನಗರಕ್ಕೆ ಕೊಟ್ಟಂತಹ ಕೊಡುಗೆ ಅಷ್ಟಿಷ್ಟಲ್ಲ. ರಾಜ್ಯದಲ್ಲಿ ಎಸ್ಸಿ, ಎಸ್ಟಿಗೆ ಸಿದ್ದರಾಮಯ್ಯರವರು ಕೊಟ್ಟಂತಹ ಕೊಡುಗೆ ಇತಿಹಾಸದಲ್ಲೇ ಯಾರೂ ಕೊಟ್ಟಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಜಾರಿಗೆ ಕಾನೂನು ಜಾರಿ ತಂದರು‌..

Dhruvanarayana
ಧ್ರುವನಾರಾಯಣ್​

By

Published : Dec 1, 2020, 7:40 PM IST

ಚಾಮರಾಜನಗರ :ದಲಿತರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್ ಪ್ರಶ್ನಿಸಿದ್ದಾರೆ. ಆದರೆ, ಮಹೇಶ್ ಅವರಿಗೆ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ಆರ್ ಧ್ರುವನಾರಾಯಣ್ ಕಿಡಿಕಾರಿದ್ದಾರೆ‌.

ಮಾಜಿ ಸಂಸದ ಆರ್‌ ಧ್ರುವನಾರಾಯಣ್​

ಕೊಳ್ಳೇಗಾಲ - ಯಳಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ ಚಾಮರಾಜನಗರಕ್ಕೆ ಕೊಟ್ಟಂತಹ ಕೊಡುಗೆ ಅಷ್ಟಿಷ್ಟಲ್ಲ. ರಾಜ್ಯದಲ್ಲಿ ಎಸ್ಸಿ, ಎಸ್ಟಿಗೆ ಸಿದ್ದರಾಮಯ್ಯರವರು ಕೊಟ್ಟಂತಹ ಕೊಡುಗೆ ಇತಿಹಾಸದಲ್ಲೇ ಯಾರೂ ಕೊಟ್ಟಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಜಾರಿಗೆ ಕಾನೂನು ಜಾರಿ ತಂದರು‌.

ಈ ರೀತಿ, ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಸರಾಗಿರುವ ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಎನ್.ಮಹೇಶ್ ಅವರಿಗೆ ನೈತಿಕತೆ ಇದ್ಯಾ? ಎಂದು ಪ್ರಶ್ನಿಸಿದರು. ಮಹೇಶ್ ಅವರು ಅಧಿಕಾರಿದಲ್ಲಿದ್ದಾಗ ಸಚಿವ ಸಂಪುಟದಲ್ಲಿ ಎಸ್ಸಿ,ಎಸ್ಟಿ ಜನಾಂಗದ ಪರ ಒಂದೂ ಮಾತನಾಡಿಲ್ಲ.

ಈಗ ಶಾಸಕರಾಗಿ ಅಧಿಕಾರದಲ್ಲಿದ್ದು ಕ್ಷೇತ್ರದಲ್ಲಿ ಏನ್ ಅಭಿವೃದ್ದಿ ಮಾಡಿದ್ದಾರೆ?. ಅವಕಾಶ ವಂಚಿತರಾಗಿದ್ದೀನಿ ಅಂತಾ ಸಿದ್ದರಾಮಯ್ಯ ಅವರ ಬಗ್ಗೆ ಹೀಗೆಲ್ಲ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ABOUT THE AUTHOR

...view details