ಕರ್ನಾಟಕ

karnataka

ETV Bharat / state

ಹರಿಕಥೆ ದಾಸರಂತೆ ಮಾತನಾಡಿದರೆ ಪ್ರಯೋಜನವಿಲ್ಲ: ಕಟೀಲ್​ಗೆ ಧ್ರುವನಾರಾಯಣ್​ ಟಾಂಗ್​ - ಧ್ರುವನಾರಾಯಣ್

ಕಟೀಲ್ ಅವರಿಗೆ ಮಂಗಳೂರು ಕಡೆ ಹರಿಕಥೆ ದಾಸರಂತೆ ಮಾತನಾಡಿ ರೂಢಿ ಇದೆ. ಆದರೆ ಆ ರೀತಿ ಚಾಮರಾಜನಗರ, ಮೈಸೂರಿನಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಕಟೀಲ್​ ವಿರುದ್ಧ ಕುಟುಕಿದ್ದಾರೆ.

R. Dhruvanarayan
ಧ್ರುವನಾರಾಯಣ್

By

Published : Feb 22, 2020, 5:35 PM IST

ಚಾಮರಾಜನಗರ:ಕಾಂಗ್ರೆಸ್ ಮುಕ್ತ ಚಾಮರಾಜನಗರ ಮಾಡಬೇಕೆಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮಾತಿಗೂ ಹರಿಕಥೆ ದಾಸರ ಮಾತಿಗೂ ವ್ಯತ್ಯಾಸವಿಲ್ಲ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್​ ಟಾಂಗ್​ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಟೀಲ್ ಅವರಿಗೆ ಮಂಗಳೂರು ಕಡೆ ಹರಿಕಥೆ ದಾಸರಂತೆ ಮಾತನಾಡಿ ರೂಢಿ ಇದೆ. ಆದರೆ, ಆ ರೀತಿ ಚಾಮರಾಜನಗರ, ಮೈಸೂರಿನಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಕುಟುಕಿದ ಅವರು, ಉತ್ತರನ ಪೌರುಷ ಬಿಟ್ಟು ಕೇಂದ್ರ ಸರ್ಕಾರದ ಮುಂದೆ ನಿಮ್ಮ ಪೌರುಷ ತೋರಿಸಿ ಎಂದು ಛೇಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಆರ್. ಧ್ರುವನಾರಾಯಣ್

ಸಿದ್ದರಾಮಯ್ಯ ಅವರದ್ದು ನಿದ್ರೆ ಸರ್ಕಾರ ಎಂದಿದ್ದಾರೆ. ಆದರ ಸಿದ್ದರಾಮಯ್ಯ ಅವರದ್ದು ಸರ್ಕಾರ ಸದೃಢ ಸರ್ಕಾರವಾಗಿತ್ತು. ಯಾವುದೇ ಆಪಾದನೆ, ಕಳಂಕ ಇಲ್ಲದೇ ಒಳ್ಳೆಯ ಆಡಳಿತ ನೀಡಿದ್ದಾರೆ ಎಂಬುದನ್ನ ಕಟೀಲ್​ ಅರಿತು ಮಾತನಾಡುವುದು ಒಳಿತು ಎಂದು ಧ್ರುವನಾರಾಯಣ ಹರಿಹಾಯ್ದರು.

ಇದೇ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನವರು ಮೂಢನಂಬಿಕೆಗೆ ಜೋತು ಬೀಳದೆ ಚಾಮರಾಜನಗರಕ್ಕೆ ಬರಬೇಕು. ಜಿಲ್ಲೆಗೆ ಬಜೆಟ್ ನಲ್ಲಿ ಕಾನೂನು ಕಾಲೇಜು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಅಷ್ಟೇ ಅಲ್ಲ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details