ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಬ್ಯಾನರ್​ನಲ್ಲಿದ್ದರಷ್ಟೇ ಎಲ್ಲರೂ ನಾಯಕರು, ಪಾರ್ಟಿ ಬಿಟ್ರೇ ಯಾರೂ ನಾಯಕರಲ್ಲ : ಯು ಟಿ ಖಾದರ್

ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ಹೇಳಿದಂತೆ ನಾಯಕರು ನಡೆದುಕೊಳ್ಳುತ್ತಾರೆ. ಮೈಸೂರು ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ನಾಯಕರಿಂದ ಗಲಾಟೆ ಆಗಿದೆ ಎಂಬುದು ಮಾಧ್ಯಮದವರ ಸೃಷ್ಟಿ..

Former Minister UT Khader
ಮಾಜಿ ಸಚಿವ ಯು.ಟಿ‌.ಖಾದರ್

By

Published : Feb 27, 2021, 2:38 PM IST

ಚಾಮರಾಜನಗರ :ಕಾಂಗ್ರೆಸ್ ಬ್ಯಾನರ್​ನಲ್ಲಿದ್ದರಷ್ಟೇ ಎಲ್ಲರೂ ನಾಯಕರು. ಕಾಂಗ್ರೆಸ್ ಬಿಟ್ಟು ಹೋದರೆ ಯಾರೂ ನಾಯಕರಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂಬುದೇ ನಾಯಕ. ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಒಗ್ಗಟ್ಟಾಗಿದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಹಿಂದ ನಾಯಕರಾಗಲು, ಅಲ್ಪಸಂಖ್ಯಾತ ನಾಯಕರಾಗಲು ಯಾರೂ ಯತ್ನಿಸುತ್ತಿಲ್ಲ. ಕಾಂಗ್ರೆಸ್ ಪಾರ್ಟಿಯೇ ನಾಯಕ. ಕಾಂಗ್ರೆಸ್ ಎಲ್ಲರಿಗೂ ಕೊಡೆ ಇದ್ದಂತೆ.

ಕಾಂಗ್ರೆಸ್‌ನ ಬಣ ರಾಜಕೀಯದ ಬಗ್ಗೆ ಮಾಜಿ ಸಚಿವ ಯು ಟಿ ಖಾದರ್ ಪ್ರತಿಕ್ರಿಯೆ..

ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ಹೇಳಿದಂತೆ ನಾಯಕರು ನಡೆದುಕೊಳ್ಳುತ್ತಾರೆ. ಮೈಸೂರು ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ನಾಯಕರಿಂದ ಗಲಾಟೆ ಆಗಿದೆ ಎಂಬುದು ಮಾಧ್ಯಮದವರ ಸೃಷ್ಟಿ ಎಂದು ಅಸಮಾಧಾನ ಹೊರ ಹಾಕಿದರು.

ಬಿಜೆಪಿಯವರು ಕೇವಲ ಪ್ರಚಾರಕ್ಕಾಗಿ ಎಸ್​ಡಿಪಿಐ, ಪಿಎಫ್ಐ ಎಂಬ ಸಂಘಟನೆಗಳ ಹೆಸರು ಹೇಳಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ.‌ ಆ ಸಂಘಟನೆಗಳ ವಿರುದ್ಧದ ಪ್ರಕರಣವೂ ಸಾಬೀತಾಗಿಲ್ಲ, ಇವರು ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದರು.

ABOUT THE AUTHOR

...view details