ಕರ್ನಾಟಕ

karnataka

ETV Bharat / state

ಮಲೆಮಹದೇಶ್ವರನಿಗೆ ಬೆಳ್ಳಿ ಕಣ್ಣು ಕಾಣಿಕೆ ನೀಡಿದ ಮಾಜಿ ಸಿಎಂ ಎಸ್​​​​​​.ಎಂ ಕೃಷ್ಣ! - Malemahadeshwara Hill Development Authority

ಭಕ್ತಾಧಿಯೊಬ್ಬರ ಮೂಲಕ ಶುಕ್ರವಾರ ಬೆಳಗ್ಗೆ ಮಾಜಿ ಸಿಎಂ ಎಸ್​​.ಎಂ. ಕೃಷ್ಣ ಕಳುಹಿಸಿದ್ದ ಕಾಣಿಕೆಯನ್ನು ಸ್ವೀಕರಿಸಿದ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಇಂದು ಅದನ್ನು ದೇವರಿಗೆ ಧರಿಸಿದ್ದಾರೆ.

Malemadeswara temple
ಮಲೆಮಹದೇಶ್ವರನಿಗೆ ಬೆಳ್ಳಿ ಕಣ್ಣು ಕಾಣಿಕೆ ನೀಡಿದ ಮಾಜಿ ಸಿಎಂ

By

Published : Mar 6, 2021, 10:25 PM IST

ಚಾಮರಾಜನಗರ: ನಾಡಿನ ಪ್ರಮುಖ ದೇವಾಲಯವಾದ ಹನೂರು ತಾಲೂಕಿನ ಮಲೆಮಹದೇಶ್ವರನಿಗೆ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ 1,110 ಗ್ರಾಂ ತೂಕದ ಬೆಳ್ಳಿ ಕಣ್ಣುಗಳನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ.

ಮಲೆಮಹದೇಶ್ವರನಿಗೆ ಬೆಳ್ಳಿ ಕಣ್ಣು ಕಾಣಿಕೆ ನೀಡಿದ ಮಾಜಿ ಸಿಎಂ

ಓದಿ: ಆದೇಶ ಪಾಲಿಸದ ಬಿಬಿಎಂಪಿಗೆ 75 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಭಕ್ತಾಧಿಯೊಬ್ಬರ ಮೂಲಕ ಶುಕ್ರವಾರ ಬೆಳಗ್ಗೆ ಎಸ್​​.ಎಂ.ಕೆ ಕಳುಹಿಸಿದ್ದ ಕಾಣಿಕೆಯನ್ನು ಸ್ವೀಕರಿಸಿ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಇಂದು ಅದನ್ನು ದೇವರಿಗೆ ಧರಿಸಿದ್ದಾರೆ. ಇನ್ನು, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸದಾಶಿವನಗರದಲ್ಲಿನ ಕೃಷ್ಣ ಅವರ ಮನೆಗೆ ಭೇಟಿ ಮಾಡಿ ಅಭಿನಂದನಾ ಪತ್ರ ಹಾಗೂ ದೇವರ ಪ್ರಸಾದ‌ ನೀಡಿದ್ದಾರೆ.

ಮಲೆಮಹದೇಶ್ವರನಿಗೆ ಬೆಳ್ಳಿ ಕಣ್ಣು ಕಾಣಿಕೆ ನೀಡಿದ ಮಾಜಿ ಸಿಎಂ

ಮಲೆಮಹದೇಶ್ವರ ಎಸ್ಎಂಕೆ ಅವರ ಮನೆದೇವರಾಗಿದ್ದು, ಸಿದ್ಧಾರ್ಥ ನಿಧನದ ಬಳಿಕ ಕ್ಷೇತ್ರಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು‌. ಈಗ ಮೊಮ್ಮಗನ ಮದುವೆ ಬಳಿಕ ದೇವರಿಗೆ ಕಾಣಿಕೆ ನೀಡಿ, ಶೀಘ್ರದಲ್ಲೇ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಮಲೆಮಹದೇಶ್ವರನಿಗೆ ಬೆಳ್ಳಿ ಕಣ್ಣು ಕಾಣಿಕೆ ನೀಡಿದ ಮಾಜಿ ಸಿಎಂ

ABOUT THE AUTHOR

...view details