ಚಾಮರಾಜನಗರ: ಕಾಡಾನೆ ದಾಳಿಯಿಂದ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಸಿಮೇಟಿ ಕ್ಯಾಂಪ್ ಬಳಿ ನಡೆದಿದೆ. ಅರಣ್ಯ ಇಲಾಖೆ ವಾಚರ್ ಕಿಶೋರ್ ಕುಮಾರ್( 45) ಮೃತರು. ಅವರ ಮಗ 20 ವರ್ಷದ ಮಾದೇಗೌಡ ಗಾಯಗೊಂಡಿದ್ದಾರೆ.
ವಾಚರ್ ಅವರ ಪುತ್ರನ ಸೊಂಟಕ್ಕೆ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಮೇಟಿ ಕ್ಯಾಂಪ್ಗೆ ಬೈಕ್ನಲ್ಲಿ ತೆರಳುವಾಗ ಕಾಡಾನೆ ದಾಳಿ ಮಾಡಿ ಬೈಕ್ ಹಾಗೂ ಕಿಶೋರ್ ಕುಮಾರ್ ಅವರನ್ನು ತುಳಿದು ಹಾಕಿದೆ.