ಕರ್ನಾಟಕ

karnataka

ETV Bharat / state

ನಿರ್ಬಂಧಿತ ಪ್ರದೇಶದಲ್ಲಿ ಕುಟುಂಬಸ್ಥರೊಂದಿಗೆ ಅರಣ್ಯ ಸಿಬ್ಬಂದಿ ಪ್ರವಾಸ ಆರೋಪ..! - Biligiri Rangana bettaTiger Protected Area

ಪುಣಜನೂರು ವಲಯದ ಉಪವಲಯ ಅರಣ್ಯಾಧಿಕಾರಿ ಸೈಯದ್ ಇಕ್ರಂ ಪಾಷಾ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಬಂದು ಕೋರ್ ಏರಿಯಾದಲ್ಲಿ ಪ್ರವಾಸ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

Chamarajanagar
ನಿರ್ಬಂಧಿತ ಪ್ರದೇಶದಲ್ಲಿ ಕುಟುಂಬಸ್ಥರೊಂದಿಗೆ ಅರಣ್ಯ ಸಿಬ್ಬಂದಿ ಪ್ರವಾಸ.

By

Published : Jul 28, 2021, 2:14 PM IST

Updated : Jul 28, 2021, 3:18 PM IST

ಚಾಮರಾಜನಗರ:ಸಾರ್ವಜನಿಕ ನಿರ್ಬಂಧಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮನೆಮಂದಿ ಸುತ್ತಾಡಿ, ಕಾಡಿನಲ್ಲಿ ಕ್ರಿಕೆಟ್ ಆಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೂದಿಪಡಗ ಗೆಸ್ಟ್ ಹೌಸ್ ಬಳಿ ಈ ಘಟನೆ ನಡೆದಿದೆ.

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಉಪವಲಯ ಅರಣ್ಯಾಧಿಕಾರಿ ಸೈಯದ್ ಇಕ್ರಂ ಪಾಷಾ ಎಂಬುವವರ ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ. ಇಕ್ರಂ ಪಾಷಾ, ಜುಲೈ 24ರಂದು ಹತ್ತಾರು ಕಾರುಗಳಲ್ಲಿ ಮನೆಮಂದಿಯನ್ನೆಲ್ಲಾ ಕರೆದುಕೊಂಡುವ ಬಂದು ಕೋರ್ ಏರಿಯಾದಲ್ಲಿ ಪ್ರವಾಸ ಮಾಡಿಸಿದ್ದಾರೆ. ಜೊತೆಗೆ ನಿರ್ಬಂಧಿತ ಪ್ರದೇಶದಲ್ಲಿ 25-30 ಮಂದಿ ಆಡಿದ್ದಾರೆ ಎನ್ನಲಾಗಿದೆ.

ನಿರ್ಬಂಧಿತ ಪ್ರದೇಶದಲ್ಲಿ ಕುಟುಂಬಸ್ಥರೊಂದಿಗೆ ಅರಣ್ಯ ಸಿಬ್ಬಂದಿ ಪ್ರವಾಸ ಆರೋಪ

ಪ್ರವಾಸಿಗರು, ಸ್ಥಳೀಯರು ಅರಣ್ಯ ಪ್ರವೇಶಿಸಿದರೆ, ಚೆಕ್ ಪೋಸ್ಟ್ ದಾಟುವುದು 5 ನಿಮಿಷ ತಡವಾದರೆ ದಂಡ ಹಾಕುವ ಅರಣ್ಯಾಧಿಕಾರಿಗಳು ಈ ಪ್ರಕರಣ ಗೊತ್ತಿದ್ದು, ಸುಮ್ಮನಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಮನೆಮಂದಿಗೊಂದು ನ್ಯಾಯ, ಜನರಿಗೊಂದು ನ್ಯಾಯವೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಈ ಸಂಬಂಧ ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್, ಬಿಆರ್​ಟಿಡಿಸಿಎಫ್ ಸಂತೋಷ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿತರಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಇದನ್ನೂ ಓದಿ:ಬೀದರ್: 15 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಲೇಡಿ ತಹಶೀಲ್ದಾರ್

Last Updated : Jul 28, 2021, 3:18 PM IST

ABOUT THE AUTHOR

...view details