ಕೊಳ್ಳೇಗಾಲ(ಚಾಮರಾಜನಗರ) :ಅರಣ್ಯ ಇಲಾಖೆಯ ಬಫರ್ ಝೋನ್ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಜಿಂಕೆ ಬೇಟೆಯಾಡಿದ ಓರ್ವನ ಬಂಧನ ; 20 ಕೆಜಿ ಮಾಂಸ, ನಾಡಬಂದೂಕು ವಶ - ಅರಣ್ಯ ಇಲಾಖೆಯ ಬಫರ್ ಝೋನ್ ಉಪ್ಪಳ್ಳ ಅರಣ್ಯ ಪ್ರದೇಶ
ಈ ಕೃತ್ಯದಲ್ಲಿ ಪಾಲ್ಗೊಂಡು ಪರಾರಿಯಾಗಿರುವ ಆರೋಪಿಗಳನ್ನ ಬಲೆಗೆ ಕೆಡವಲು ಅರಣ್ಯ ಇಲಾಖೆ ಸಿಬ್ಬಂದಿ ಚುರುಕಾಗಿದೆ..
ಕಾಂಚಹಳ್ಳಿ ಗ್ರಾಮದ ಮುರುಗೇಗೌಡ( 45) ಎಂಬಾತ ಬಂಧಿತ ಆರೋಪಿ. ಇಲ್ಲಿನ ಬಫರ್ ಝೋನ್ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಬೆಳ್ಳಂಬೆಳ್ಳಗೆ 4 ಗಂಟೆ ಸಮಯದಲ್ಲಿ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ನಾಡ ಬಂದೂಕಿನಿಂದ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿಲಾಗಿದೆ.
ಬಳಿಕ ಆತನ ಬಳಿ ಇದ್ದ ನಾಡಬಂದೂಕು, ಮದ್ದು ಗುಂಡುಗಳು ಸೇರಿ 20 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಪಾಲ್ಗೊಂಡು ಪರಾರಿಯಾಗಿರುವ ಕಾಂಚಳ್ಳಿ ಗ್ರಾಮದ ಪೆರುಮಾಳಶೆಟ್ಟಿ, ಮಾದೇಶ್, ಮುತ್ತೇಗೌಡ ಹಾಗೂ ಗೋವಿಂದೇಗೌಡ ಎಂಬ ಆರೋಪಿಗಳನ್ನ ಬಲೆಗೆ ಕೆಡವಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದೆ.