ಕರ್ನಾಟಕ

karnataka

ETV Bharat / state

ಮಾಕಳಿ ಬೇರು ಕಳ್ಳರಿಂದ ಅರಣ್ಯಾಧಿಕಾರಿಗಳ ಮೇಲೆ ಪ್ರತಿದಾಳಿ: ಮೂವರ ಬಂಧನ - ಬಿಳಿಗಿರಿರಂಗನ ಬೆಟ್ಟದಲ್ಲಿ ಮಾಕಳಿ ಬೇರು ಕಳ್ಳತನ

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾಕಳಿ ಬೇರನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Forest officer arrested makali beru thieves
ಮೂವರ ಬಂಧನ

By

Published : Aug 21, 2021, 11:04 PM IST

ಚಾಮರಾಜನಗರ:ಮಾಕಳಿ ಬೇರು ಕಳ್ಳರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಪ್ರತಿದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರು ಖದೀಮರನ್ನು ಬಂಧಿಸಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿ ಗ್ರಾಮದ ಪರಿಯನಾಯಗಂ, ಸೊಸೈರಾಜು, ಸಿ.ರಾಜು ಎಂಬುವವರನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಈ ಖದೀಮರು ಯಳಂದೂರು ತಾಲೂಕಿನ ಕೆ.ದೇವರಹಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಮಾಕಳಿ ಬೇರು ಸಾಗಿಸುತ್ತಿದ್ದರು.

ಈ ಕುರಿತಂತೆ ಖಚಿತ ಮಾಹಿತಿ ಪಡೆದ ಯಳಂದೂರು ವಲಯ ಅರಣ್ಯಾಧಿಕಾರಿ ಲೋಕೇಶ್ ಮತ್ತು ತಂಡ ದಾಳಿ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿ ಬರುತ್ತಿದ್ದ ಕಳ್ಳರಿಬ್ಬರು ಅರಣ್ಯ ಇಲಾಖೆ ಜೀಪಿಗೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ಬೊಲೆರೋ ವಾಹನ ಜಖಂಗೊಂಡಿದೆ. ಕಾರಿನ ಮುಂಭಾಗವೂ ನಜ್ಜುಗುಜ್ಜಾಗಿದ್ದರಿಂದ ಕಾರನ್ನು ಅಲ್ಲೇ ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ.

ಸದ್ಯ ಕಳ್ಳರಿಂದ ಬರೋಬ್ಬರಿ 935 ಕೆಜಿ ಮಾಕಳಿ ಬೇರು, ಟಾಟಾ ಏಸ್ ಹಾಗೂ ಇಯಾನ್ ಕಾರನ್ನು ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಇಬ್ಬರ ಪತ್ತೆಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ.

ABOUT THE AUTHOR

...view details