ಚಾಮರಾಜನಗರ:ಕುಡಿದ ಮತ್ತಿನಲ್ಲಿ ಹಣ ಕೊಡುವಂತೆ ಲಾರಿ ಚಾಲಕನಿಗೆ ಧಮ್ಕಿ ಹಾಕಿದ್ದ ಅರಣ್ಯ ಇಲಾಖೆ ನೌಕರನನ್ನು ಅಮಾನತು ಮಾಡಿ ಡಿಸಿಎಫ್ ಆದೇಶಿಸಿದ್ದಾರೆ. ಫಾರೆಸ್ಟ್ ಗಾರ್ಡ್ ಮೋಹನ್ ಕುಮಾರ್ ಅಮಾನತುಗೊಂಡ ನೌಕರ.
ಕಳೆದ ಆ.1 ರಂದು ಕರ್ನಾಟಕ ತಮಿಳುನಾಡು ಗಡಿಯ ಪಾಲಾರ್ ಚೆಕ್ ಪೋಸ್ಟ್ಗೆ ಮೋಹನ್ ಕುಮಾರ್ನನ್ನು ನಿಯೋಜಿಸಲಾಗಿತ್ತು. ಈ ವೇಳೆ, ಮದ್ಯದ ಮತ್ತಿನಲ್ಲಿ ಲಾರಿ ಚಾಲಕನಿಗೆ ಹಣ ಕೊಡುವಂತೆ ಧಮ್ಕಿ ಹಾಕಿದ್ದಲ್ಲದೇ ಬಂದೂಕಿನಿಂದ ಸುಟ್ಟು ಹಾಕುತ್ತೇನೆಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗ್ತಿದೆ.