ಕರ್ನಾಟಕ

karnataka

ETV Bharat / state

ಗುಡ್ಡದ ಮೇಲೆ ಕೂರುತ್ತಿದ್ದ ಚಿರತೆ ಬೋನಿಗೆ, ಗ್ರಾಮಸ್ಥರು ನಿರಾತಂಕ - ಚಾಮರಾಜನಗರಲ್ಲಿ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ

ಚಾಮರಾಜನಗರ ತಾಲೂಕಿನ ಕಡುವಿನಕಟ್ಟೆ ಹುಂಡಿ ಗ್ರಾಮದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ.

Leopard captured
ಚಿರತೆ ಸೆರೆ

By

Published : Sep 26, 2021, 7:27 PM IST

ಚಾಮರಾಜನಗರ:ಕಳೆದ ಮೂರು ದಿನಗಳ ಹಿಂದೆ ಕರಿಕಲ್ಲು ಕ್ವಾರಿ ಮೇಲೆ ಕೂರುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಬೋನಿಗೆ ಬಿದ್ದಿ ಚಿರತೆ

ತಾಲೂಕಿನ ಕಡುವಿನಕಟ್ಟೆ ಹುಂಡಿ (ಕೆ‌.ಕೆ.ಹುಂಡಿ) ಗ್ರಾಮದ ಹೊರವಲಯದಲ್ಲಿ ಸ್ಥಗಿತಗೊಂಡಿದ್ದ ಕ್ವಾರಿ ಗುಡ್ಡದ ಮೇಲೆ ಆಗಾಗ ಚಿರತೆ ಬಂದು ಕೂತು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆಗಾಗ ಕುರಿ, ಮೇಕೆಗಳನ್ನು ತಿಂದು ಹಾಕಿತ್ತು. ಇದರ ಉಪಟಳ ಹೆಚ್ಚಾಗಿದ್ದರಿಂದ ಚಿರತೆ ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಬೋನಿಟ್ಟು ನಾಯಿ ಕಟ್ಟಿ ಹಾಕಿ ಕಾಯುತ್ತಿತ್ತು. ಇಂದು ಎರಡೂವರೆ ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆಯನ್ನು ಪುಣಜನೂರು ವಲಯದ ನೀರದುರ್ಗಿ ಎಂಬ ಸ್ಥಳಕ್ಕೆ ಬಿಡಲಾಗಿದೆ ಎಂದು ಚಾಮರಾಜನಗರ ಆರ್​​ಎಫ್ಒ ಅಭಿಲಾಶ್ ತಿಳಿಸಿದ್ದಾರೆ.

ಇದನ್ನೂ ಓದಿ: ರೈತರಿಂದ ಭಾರತ್ ಬಂದ್​: ನಾಳೆ ಏನಿರುತ್ತೆ, ಏನಿರಲ್ಲ?

ABOUT THE AUTHOR

...view details