ಚಾಮರಾಜನಗರ :ಕಳೆದ ಆರು ತಿಂಗಳಲ್ಲಿ ಅರಣ್ಯ ಇಲಾಖೆ ಬರೋಬ್ಬರಿ 8 ಚಿರತೆಗಳನ್ನು ಸೆರೆ ಹಿಡಿದಿದೆ. ಇದರಿಂದ ಕಳೆದ 3 ತಿಂಗಳಿಂದ ತಾಲೂಕಿನಲ್ಲಿ ಚಿರತೆ ದಾಳಿಗೆ ಜಾನುವಾರು ಸಾವುಗಳಾಗಲಿ, ಗಾಯಗೊಂಡಿರುವುದಾಗಲಿ ವರದಿಯಾಗಿಲ್ಲ.
ಇಂದು ವೀರನಪುರದಲ್ಲಿ ಸೆರೆಯಾದ ಹೆಣ್ಣು ಚಿರತೆಯನ್ನೂಳಗೊಂಡಂತೆ ಕಳೆದ 6 ತಿಂಗಳುಗಳಲ್ಲಿ 8 ಚಿರತೆಗಳನ್ನ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಇದರಿಂದ ನಿಟ್ಟುಸಿರು ಬಿಟ್ಟಿರುವ ರೈತರು ನಿರಾತಂಕದಿಂದ ಜಮೀನುಗಳಿಗೆ ತೆರಳುತ್ತಿದ್ದಾರೆ.