ಕರ್ನಾಟಕ

karnataka

ETV Bharat / state

ಡಿಸಿ ಗ್ರಾಮ ವಾಸ್ತವ್ಯ ಮುಗಿಸಿ ಹಿಂತಿರುಗುವಾಗ ಹೃದಯಾಘಾತ : ಹನೂರು ಆಹಾರ ನಿರೀಕ್ಷಕ ನಿಧನ - ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಹನೂರು ತಾಲೂಕಿನ ಆಹಾರ ನಿರೀಕ್ಷಕ ಚಂದ್ರನಾಯ್ಕ ಸಾವಿಗೀಡಾಗಿದ್ದಾರೆ..

Food checking inspector died in chamarajanagar
ಹನೂರು ಆಹಾರ ನಿರೀಕ್ಷಕ ನಿಧನ

By

Published : Dec 19, 2021, 5:49 PM IST

ಚಾಮರಾಜನಗರ: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಆಹಾರ ನಿರೀಕ್ಷಕರೊಬ್ಬರು ಹೃದಯಾಘಾತದಿಂದ ಅಸುನೀಗಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.

ಹನೂರು ತಾಲೂಕಿನ ಆಹಾರ ನಿರೀಕ್ಷಕ ಚಂದ್ರನಾಯ್ಕ ಮೃತರು. ಶನಿವಾರ ಚಾಮರಾಜನಗರ ಡಿಸಿ ಚಾರುಲತಾ ಗೋಪಿನಾಥಂ ಗ್ರಾಮದಲ್ಲಿ ನಡೆಸಿದ ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡಿದ್ದರು. ಇಂದು ಗ್ರಾಮದಿಂದ ಹಿಂತಿರುಗುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಬೆಳಗಾವಿ ಅಧಿವೇಶನಕ್ಕೆ ಹೆಚ್‌ಡಿಕೆ ಗೈರು ; ದಳಪತಿಗೆ ಬೆಳಗಾವಿ ಅಧಿವೇಶನ ಬಗ್ಗೆ ನಿರಾಸಕ್ತಿನಾ?

ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.

ABOUT THE AUTHOR

...view details