ಕರ್ನಾಟಕ

karnataka

ETV Bharat / state

ಕಾರ್ಯನಿರತ ಅಧಿಕಾರಿಗಳಿಗೆ ಊಟ ಸೌಲಭ್ಯ... ಮಾನವೀಯತೆ ಮೆರೆದ ಪ್ರಣಯ್​ - corona effect in state

ತಾಲೂಕಿನ ಮೂಲೆಹೊಳೆ ಮತ್ತು ಕೆಕ್ಕನಹಳ್ಳಿ ಚೆಕ್​ಪೋಟ್ಟ್​ನಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಸಿಬ್ಬಂದಿಗೆ ಯುವ ಮೋರ್ಚಾದಿಂದ ಊಟದ ವ್ಯವಸ್ಥೆ ಮಾಡಲಾಯಿತು.

food arraignments to all government employs
ಕಾರ್ಯನಿರತ ಅಧಿಕಾರಿಗಳಿಗೆ ಊಟ ಸೌಲಭ್ಯ

By

Published : Mar 28, 2020, 9:02 PM IST

ಗುಂಡ್ಲುಪೇಟೆ: ಕೋವಿಡ್-19 ಸೋಂಕು ನಿವಾರಣೆಗೆ ತಾಲೂಕಿನ ಗಡಿ ಭಾಗದಲ್ಲಿ ಹಗಲಿರುಳು ದುಡಿಯುತ್ತಿರುವ ಅರಣ್ಯ ಇಲಾಖೆ, ಪೊಲೀಸ್​ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ನಿತ್ಯ ಒಂದು ಬಾರಿಯ ಊಟದ ವ್ಯವಸ್ಥೆ ಮಾಡಿದ್ದಾರೆ.

ಕಾರ್ಯನಿರತ ಅಧಿಕಾರಿಗಳಿಗೆ ಊಟ ಸೌಲಭ್ಯ

ರಾಷ್ಟ್ರೀಯ ಹೆದ್ದಾರಿ 766 ಮತ್ತು 67ರ ಮೂಲೆಹೊಳೆ ಮತ್ತು ಕೆಕ್ಕನಹಳ್ಳ ಚೆಕ್​ಪೋಟ್ಟ್​​ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂದಾಯ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಸೋಂಕು ನಿವಾರಣೆಗೆ ಪಣತೊಟ್ಟ ಸರ್ಕಾರದ ನಿರ್ದೇಶನಗಳಿಗೆ ಕುಟುಂಬವನ್ನು ಬಿಟ್ಟು, ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರಣವ್​ ಮನವಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ದಿನಸಿ ಅಂಗಡಿಗಳಿಲ್ಲ. ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಲಾಕ್​ಡೌನ್​ ಮುಗಿಯುವವರೆಗೂ ಊಟ ವ್ಯವಸ್ಥೆ ಮಾಡುವುದಾಗಿ ಎಂ.ಪ್ರಣಾಯ್ ತಿಳಿಸಿದರು.

ABOUT THE AUTHOR

...view details