ಚಾಮರಾಜನಗರ:ಬಸ್ಸಿಗಾಗಿ ಕಾದು ನಿಂತಿದ್ದ ಐವರು ಮಹಿಳೆಯರಿಗೆ ಕಾರೊಂದು ಡಿಕ್ಕಿಯಾಗಿರುವ ಘಟನೆ ಯಳಂದೂರಿನ ಅಂಬಳೆಪಾಲದಲ್ಲಿ ನಡೆದಿದೆ.
ಬಸ್ಸಿಗಾಗಿ ಕಾದು ನಿಂತಿದ್ದವರ ಮೇಲೆ ಹರಿದ ಕಾರು: ಮೂವರ ಮಹಿಳೆಯರ ಸ್ಥಿತಿ ಗಂಭೀರ - Bus, car, collision, dikki,
ಬಸ್ಸಿಗಾಗಿ ಕಾಯುತ್ತಿದ್ದ ಐವರು ಮಹಿಳೆಯರ ಮೇಲೆ ಕಾರು ಹರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಬಸ್ಸಿಗಾಗಿ ನಿಂತಿದ್ದವರಿಗೆ ಕಾರು ಡಿಕ್ಕಿ: ಮೂವರ ಸ್ಥಿತಿ ಗಂಭೀರ
ರತ್ಮಮ್ಮ, ಮಾಲಮ್ಮ, ಪುಟ್ಟನಂಜಮ್ಮ, ಪುಟ್ಟನಿಂಗಮ್ಮ ಹಾಗೂ ಮಹಾದೇವಿ ಎಂಬುವರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮಹಿಳಾ ಸಂಘದ ವಾರ್ಷಿಕ ಸಭೆ ಮುಗಿಸಿಕೊಂಡು ತಮ್ಮ ಊರುಗಳಿಗೆ ಹಿಂದಿರುಗಲು ಬಸ್ಗಾಗಿ ಕಾದು ನಿಂತಿದ್ದ ವೇಳೆ ಬೆಂಗಳೂರು ನೋಂದಣಿಯಾಗಿರುವ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇನ್ನು ಘಟನೆ ನಡೆಯುತ್ತಿದ್ದಂತೆ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದು, ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
Bus, car, collision, dikki,