ಚಾಮರಾಜನಗರ :ಕಡಿಮೆ ಹಣಕ್ಕೆ ನೀಡುವುದಾಗಿ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನಗಳಾದ ಆಯಿಲ್, ಡೀಸೆಲ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಆಹಾರ ಇಲಾಖೆ ಪತ್ತೆಹಚ್ಚಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಕಾರ್ತಿ, ಈಶ್ವರ್‌ಮೂರ್ತಿ, ರವಿ, ಬಿಹಾರ ಮೂಲದ ರಾಜು ಹಾಗೂ ಚಾಮರಾಜನಗರದ ಪೃಥ್ವಿ ಬಂಧಿತ ಆರೋಪಿಗಳು. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್ಗೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ರಾಜಣ್ಣ ಹಾಗೂ ಮತ್ತಿತ್ತರ ಸಿಬ್ಬಂದಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕರಿಕಲ್ಲು ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.