ಕರ್ನಾಟಕ

karnataka

ETV Bharat / state

ಐವರು ಬೇಟೆಗಾರರ ಬಂಧನ: ಅಕ್ರಮ ನಾಡ ಬಂದೂಕು, ಸಿಡಿ ಮದ್ದು ವಶ - Kollegala latest News

ಕಾಡು ಪ್ರಾಣಿಗಳ ಬೇಟೆಗೆ ಸಿಡಿಮದ್ದು ಒಯ್ಯುತ್ತಿದ್ದ ಖದೀಮರ ತಂಡವನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

Kollegala
ಬೇಟೆಗಾರರ ಬಂಧನ

By

Published : Mar 5, 2021, 12:49 PM IST

ಕೊಳ್ಳೇಗಾಲ: ಬೇಟೆಗಾಗಿ ಸಿಡಿಮದ್ದು ಒಯ್ಯುತ್ತಿದ್ದ ಜೋಸೆಫ್ ಬಂಧನದ ಬೆನ್ನಲ್ಲೇ ಇನ್ನೂ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜೋಸೆಫ್, ನಲ್ಲಸ್ವಾಮಿ, ಕರಿಯಪ್ಪ ಅಲಿಯಾಸ್ ವೆಂಕಟಪ್ಪ, ಮಹಿಮ, ತೋಮಸ್ ಬಂಧಿತ ಆರೋಪಿಗಳು.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಐವರು ಕಾಡುಪ್ರಾಣಿಗಳ ಬೇಟೆಗಾರರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು ಆರೋಪಿಗಳಿಂದ ಎರಡು ನಾಡ ಬಂದೂಕು ಮತ್ತು ಗುಂಡುಗಳು ಸೇರಿದಂತೆ ಬೇಟೆಗೆ ಬಳಸುವ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಕಾಡು ಪ್ರಾಣಿಗಳ ಬೇಟೆಯಾಡಲು ಹೊಂಚು ಹಾಕಿದ್ದ ಜೋಸೆಫ್ ಎಂಬಾತನನ್ನು ಬಂಧಿಸಿ ಆತನಿಂದ ಬಂದೂಕು ಹಾಗೂ 25 ಸಿಡಿಮದ್ದಿನ ಗುಂಡುಗಳು, 6 ಸಿದ್ದಪಡಿಸಿದ ಕೇಪುಗಳು ಮತ್ತು 36 ಖಾಲಿ ಕೇಪುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು.

ಬಳಿಕ ಪ್ರಕರಣದ ಆರೋಪಿಯನ್ನು ವಿಚಾರಣೆಗೊಳಪಡಿಸಿದ ಪಿಎಸ್ಐ ವಿ.ಸಿ ಅಶೋಕ್ ಅವರು ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ ಒಂದು ನಾಡ ಬಂದೂಕು, ಮಚ್ಚು, ಚಾಕು, ಕಪ್ಪು ಮದ್ದಿನ ಪುಡಿ, ಲೋಹದ ತುಂಡು ಮತ್ತು ಬಾಲ್ಸ್‌ಗಳು, ಗಂಧಕದ ಪುಡಿ, ಪಟಾಕಿ ಮದ್ದಿನ ಪುಡಿ, ತಗಡಿನ ಕ್ಯಾಪ್​​​​​‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಬಂಧಿತ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

ABOUT THE AUTHOR

...view details