ಚಾಮರಾಜನಗರ: ರಾತ್ರಿ ವೇಳೆ 3 ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಐವರು ಬೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಹನೂರು ತಾಲೂಕಿನ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಣ (55), ಮುತ್ತಪ್ಪ(40), ಮುತ್ತುರಾಜ್(35), ಪೆರಿಯಣ್ಣ(23) ಹಾಗೂ ಗೋವಿಂದರಾಜು(27) ಬಂಧಿತ ಆರೋಪಿಗಳು. ಸತೀಶ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗ್ತಿದೆ.
ಚಾಮರಾಜನಗರ: 3 ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಐವರ ಬಂಧನ - ಚಾಮರಾಜನಗರ ಲೇಟೆಸ್ಟ್ ಕ್ರೈಂ ನ್ಯೂಸ್
ಹನೂರು ತಾಲೂಕಿನ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ಜಿಂಕೆ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಜಿಂಕೆ ಬೇಟೆಯಾಡಿದ ಐವರ ಬಂಧನ
ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಗಸ್ತಿನ ಬೆಳ್ಳತ್ತೂರು ಗುಡ್ಡ ಕಾಡಿನಲ್ಲಿ ಈ ಆರು ಮಂದಿ ನಾಡ ಬಂದೂಕಿನಿಂದ 3 ಜಿಂಕೆಗಳನ್ನು ಬೇಟೆಯಾಡಿ ತೋಟದ ಮನೆಗೆ ತಂದು ಪಾಲು ಹಾಕುತ್ತಿದ್ದರು. ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರಿಂದ ಜಿಂಕೆ ಮಾಂಸ, ಚರ್ಮ, 2 ಬೈಕ್ ಹಾಗೂ 2 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated : May 6, 2022, 7:41 PM IST