ಕರ್ನಾಟಕ

karnataka

ETV Bharat / state

ದಸರಾ ವೇದಿಕೆ ಬಳಿ ಬೆಂಕಿ: ತಪ್ಪಿದ ಭಾರಿ ಅನಾಹುತ - Mysore Dussera

ದಸರಾ ಉಪಸಮಿತಿ ವತಿಯಿಂದ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ಹಾಕಿರುವ ಮುಖ್ಯ ವೇದಿಕೆ ಹಿಂಭಾಗ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಎಡೆ ಮಾಡಿಕೊಟ್ಟಿತು.

fire-near-dasara-platform

By

Published : Oct 4, 2019, 6:08 PM IST

ಚಾಮರಾಜನಗರ: ದಸರಾ ಉಪಸಮಿತಿ ವತಿಯಿಂದ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ಹಾಕಿರುವ ಮುಖ್ಯ ವೇದಿಕೆ ಹಿಂಭಾಗ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿ ಭಾರಿ ಪ್ರಮಾಣದ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ.

ವೇದಿಕೆ ಹಿಂಭಾಗ ಇಡಲಾಗಿದ್ದ ಜನರೇಟರ್​ನಲ್ಲಾದ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಕಾಣಿಸಿಕೊಂಡು ರಿಹರ್ಸಲ್ ಕೊಠಡಿಗೂ ವ್ಯಾಪಿಸಿತು ಎನ್ನಲಾಗಿದೆ.

ದಸರಾ ವೇದಿಕೆ ಬಳಿ ಬೆಂಕಿ

ಇನ್ನೇನು ದೊಡ್ಡ ಪ್ರಮಾಣದಲ್ಲಿ ಹರಡಿಕೊಳ್ಳುವಷ್ಟರಲ್ಲಿ ಎಚ್ಚೆತ್ತುಕೊಂಡು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸ್ಥಳೀಯರೂ ಸಾಥ್​ ನೀಡಿದ್ದರು. ಅಲ್ಲಿದ್ದ ಕಲಾವಿದರ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಅದೃಷ್ಟವಶಾತ್​ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ABOUT THE AUTHOR

...view details