ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆ ಬಫರ್ ಝೋನ್​​ನಲ್ಲಿ ಬೆಂಕಿ: ಕುರುಚಲು ಕಾಡು ಭಸ್ಮ - Triyambakapura of Gundlupeta Taluk

ಬೇಸಿಗೆಗೆ ಒಣಗಿ ನಿಂತಿದ್ದ ಗಿಡ, ಹುಲ್ಲಿಗೆ ಮೊದಲು ಬೆಂಕಿ ಬಿದ್ದು ಗಾಳಿಯ‌ ರಭಸಕ್ಕೆ ಇಡೀ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಜಮೀನು, ಮೇವಿನ‌ ಮೆದೆಗಳಿಗೆ ಬೆಂಕಿ ತಗುಲುವ ಆತಂಕ ಸುತ್ತಮುತ್ತಲಿನ ರೈತರಲ್ಲಿ ಮನೆ ಮಾಡಿದೆ.

Fire in the Gundlupete buffer zone
ಗುಂಡ್ಲುಪೇಟೆ ಬಫರ್ ಜೋನಿನಲ್ಲಿ ಬೆಂಕಿ

By

Published : Mar 13, 2021, 9:26 PM IST

ಚಾಮರಾಜನಗರ: ಕಳೆದ ಮೂರು ದಿನಗಳ ಬಳಿಕ ಬಫರ್ ಝೋನ್​ನಲ್ಲಿ ಬೆಂಕಿ ಬಿದ್ದು ಹತ್ತಾರು ಎಕರೆ ಕುರುಚಲು ಕಾಡು ಭಸ್ಮವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತ್ರಯಂಬಕಪುರದಲ್ಲಿ ನಡೆದಿದೆ.

ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ.. ದಿಢೀರ್‌ ಆಗಿ ಪ್ರತ್ಯಕ್ಷವಾದ ಯುವತಿ ಹೇಳಿದ್ದಿಷ್ಟೇ..

ಬೇಸಿಗೆಗೆ ಒಣಗಿ ನಿಂತಿದ್ದ ಗಿಡ, ಹುಲ್ಲಿಗೆ ಮೊದಲು ಬೆಂಕಿ ಬಿದ್ದು ಗಾಳಿಯ‌ ರಭಸಕ್ಕೆ ಇಡೀ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಜಮೀನು, ಮೇವಿನ‌ ಮೆದೆಗಳಿಗೆ ಬೆಂಕಿ ತಗುಲುವ ಆತಂಕ ಸುತ್ತಮುತ್ತಲಿನ ರೈತರಲ್ಲಿ ಮನೆ ಮಾಡಿದೆ.

ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ ವಿಫಲವಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ‌. ಕೇವಲ ಮೂರು ದಿನದ ಅವಧಿಯಲ್ಲಿ ಎರಡು ಬಾರಿ ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ಬಫರ್ ಝೋನ್​ನಲ್ಲಿ ಬೆಂಕಿ ಬಿದ್ದಿದೆ.

ABOUT THE AUTHOR

...view details