ಚಾಮರಾಜನಗರದ ಎಡಬೆಟ್ಟದಲ್ಲಿ ಬೆಂಕಿ.. ಹತ್ತಾರು ಎಕರೆ ಕುರುಚಲು ಕಾಡು ಭಸ್ಮ - fire near chamrajnagar medical college
ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಂತಿರುವ ಎಡಬೆಟ್ಟ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡು ಹತ್ತಾರು ಎಕರೆ ಕುರುಚಲು ಗಿಡಗಳು ಬೆಂಕಿಗಾಹುತಿಯಾಗಿವೆ.
![ಚಾಮರಾಜನಗರದ ಎಡಬೆಟ್ಟದಲ್ಲಿ ಬೆಂಕಿ.. ಹತ್ತಾರು ಎಕರೆ ಕುರುಚಲು ಕಾಡು ಭಸ್ಮ fire in chamrajnagar hills](https://etvbharatimages.akamaized.net/etvbharat/prod-images/768-512-10539712-40-10539712-1612746082119.jpg)
ಕುರುಚಲು ಗಿಡಗಳು ಬೆಂಕಿಗಾಹುತಿ
ಚಾಮರಾಜನಗರ:ನಗರದ ಹೊರವಲಯದಲ್ಲಿರುವ ಎಡಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಎಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿದೆ.
ಕಳೆದ ವರ್ಷವೂ ಅಗ್ನಿ ನರ್ತನಕ್ಕೆ ಎಡಬೆಟ್ಟದ ಹತ್ತಾರು ಎಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿತ್ತು. ಕೆಲ ದಿನಗಳಿಂದ ಚಿರತೆಯೊಂದು ಎಡಬೆಟ್ಟದಲ್ಲಿ ಓಡಾಡಿಕೊಂಡಿದ್ದು, ಮೆಡಿಕಲ್ ಕಾಲೇಜಿನ ಕಾರಿಡಾರಿನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಚಿರತೆ ಓಡಾಟದಿಂದ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.