ಕೊಳ್ಳೇಗಾಲ(ಚಾಮರಾಜನಗರ): ಜಮೀನೊಂದರಲ್ಲಿ ಬೆಳೆದಿದ್ದ ತೇಗ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಟಾವು ಮಾಡಿ, ಮಾರಾಟ ಮಾಡಲು ಮುಂದಾಗಿದ್ದ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.
ಅನುಮತಿ ಪಡೆಯದೆ ತೇಗದ ಮರ ಕಟಾವು: ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲು - ತೇಗದ ಮರ ಕಟಾವು
ಅಧಿಕಾರಿಗಳ ದಾಳಿ ವೇಳೆ 4 ತೇಗದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಜಮೀನು ಮಾಲೀಕ ಸಚಿನ್ ವಿರುದ್ಧ ಅರಣ್ಯಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಅಗ್ರಹಾರದ ಸಮೀಪವಿರುವ ಜಮೀನೊಂದರಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಜಮೀನು ಮಾಲೀಕ ಸಚಿನ್ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಟಾವು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದರು.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಏಡುಕೊಂಡಲು, ಸಚಿನ್ ಎಂಬುವರ ಜಮೀನಿನಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಡಿಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಸಂಬಂಧ ಅರಣ್ಯಾಧಿಕಾರಿ ಸಿದ್ದಪ್ಪ ಹಾಗೂ ಗಾರ್ಡ್ ಪ್ರಮೋದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿದಾಗ ತೇಗದ ಮರ ಕಟಾವು ಮಾಡಿರುವುದು ತಿಳಿದು ಬಂದಿದೆ. ಸದ್ಯ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.