ಕರ್ನಾಟಕ

karnataka

ETV Bharat / state

ಬಂಡೀಪುರದಲ್ಲಿ ಪ್ರವಾಸಿಗರ ನಡುವೆ ಡಿಶುಂ - ಡಿಶುಂ.. ಟ್ವೀಟ್​ನಿಂದ ದಾಖಲಾಯ್ತು ಎಫ್​ಐಆರ್​

ಬಂಡೀಪುರದಲ್ಲಿ ಪ್ರವಾಸಿಗರ ನಡುವೆ ನಡೆದ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ನಾಲ್ವರು ಅಪರಿಚಿತರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.‌

bandipur
ಬಂಡೀಪುರ

By

Published : Aug 7, 2023, 2:16 PM IST

Updated : Aug 7, 2023, 2:31 PM IST

ಚಾಮರಾಜನಗರ : ಪ್ರವಾಸಿಗರ ನಡುವೆ ಜಟಾಪಟಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಬೆನ್ನಲ್ಲೇ ಪೊಲೀಸರು ಭಾನುವಾರ ಸಂಜೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕೇರಳ ಮೂಲದ ಅರ್ಜುನ್ ಎಂಬುವರಿಗೆ ಬೆಂಗಳೂರು ಮೂಲದ ನಾಲ್ವರು ಯುವಕರು ಅಡ್ಡಹಾಕಿ ಗಲಾಟೆ ಮಾಡಿದ್ದ ವಿಡಿಯೋವನ್ನು ಥರ್ಡ್ ಐ ಎಂಬ ಹೆಸರಿನ ಟ್ವಿಟರ್​ ಖಾತೆದಾರರೊಬ್ಬರು ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದರು.

ಟ್ವೀಟ್ ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್ ಚಾಮರಾಜನಗರ ಪೊಲೀಸ್ ಸಿಬ್ಬಂದಿ ಜೊತೆ ಮಾತನಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.‌

ದೂರಿನಲ್ಲಿ ಏನಿದೆ?: ಕಳೆದ ಜೂನ್​ 17 ರಂದು ಬೆಂಗಳೂರಿನಿಂದ ಕೇರಳಕ್ಕೆ ತೆರಳುವಾಗ ಯುವಕರ ಜೀಪಿಗೆ ಓವರ್ ಟೇಕ್ ಮಾಡಲು ಸ್ಥಳಾವಕಾಶ ಸಿಗದ ಹಿನ್ನೆಲೆಯಲ್ಲಿ ಏಕಾಏಕಿ ನನ್ನ ಕಾರನ್ನು ಅಡ್ಡಹಾಕಿ ಹೊಡೆದಿದ್ದಾರೆ. ಜೊತೆಗೆ, ಡ್ಯಾಶ್ ಬೋರ್ಡ್ ಕ್ಯಾಮರಾ ಒಡೆದು ಹಾಕಲು ಯತ್ನಿಸಿದ್ದಾರೆ. ಕೆಲಸದ ಒತ್ತಡ ಇದ್ದಿದ್ದರಿಂದ ತಡವಾಗಿ ದೂರು ಕೊಡುತ್ತಿರುವುದಾಗಿ ಅರ್ಜುನ್ ಹೇಳಿದ್ದಾರೆ.

ಇನ್ನು, ಜಟಾಪಟಿ ವಿಡಿಯೋವನ್ನು ಮಾಜಿ ಸಚಿವ ಸುರೇಶ್ ಕುಮಾರ್ ಹಂಚಿಕೊಂಡಿದ್ದು, ಈ ರೀತಿಯ ಘಟನೆಗಳಿಂದ ಪ್ರಾಣಿಗಳಿಗೂ ತೊಂದರೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟರ್​ನಲ್ಲಿ ನೆಟ್ಟಿಗರ‌ ಮಿಶ್ರ ಪ್ರತಿಕ್ರಿಯೆ : ಟ್ವಿಟರ್​ನಲ್ಲಿ ಥರ್ಡ್ ಐ ಖಾತೆದಾರ ವಿಡಿಯೋ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಮಿಶ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಂದೇ ದೃಷ್ಟಿಕೋನದಿಂದ ತನಿಖೆ ನಡೆಸದೆ ಯುವಕರು ಯಾಕೆ ಆ ರೀತಿ ಮಾಡಿದರು? ಎಂಬುದನ್ನೂ ವಿಚಾರಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಗುಂಡ್ಲುಪೇಟೆಯಲ್ಲಿ ಚಿರತೆ ಸೆರೆ ಹಿಡಿಯಲು ಬೋನಿನಲ್ಲಿಟ್ಟಿದ್ದ ಮೇಕೆ ಕಳ್ಳರ ಪಾಲು!

Last Updated : Aug 7, 2023, 2:31 PM IST

ABOUT THE AUTHOR

...view details