ಕರ್ನಾಟಕ

karnataka

ETV Bharat / state

ಗ್ರಾ.ಪಂ ಅಧ್ಯಕ್ಷ, ಪಿಡಿಒ, ಕಂಪ್ಯೂಟರ್ ಆಪರೇಟರ್ ವಿರುದ್ಧ ಎಫ್ಐಆರ್ - ಗ್ರಾಪಂ ಅಧ್ಯಕ್ಷ, ಪಿಡಿಒ, ಕಂಪ್ಯೂಟರ್ ಆಪರೇಟರ್ ವಿರುದ್ಧ ಎಫ್ಐಆರ್

ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮ ಪಂಚಾಯತ್​ನ 14 ಮತ್ತು 15 ನೇ ಹಣಕಾಸು ಯೋಜನೆಯಲ್ಲಿ 30,42,830 ಹಣವನ್ನು ವೈಯಕ್ತಿಕ ಖಾತೆಗೆ ಅಕ್ರಮವಾಗಿ ಜಮೆ ಮಾಡಿಕೊಂಡು ಬಳಿಕ ಡಿಎಆರ್ ಪೊಲೀಸ್ ಕಾನ್ಸ್​ಟೇಬಲ್ ಒಬ್ಬರಿಂದ ನೆಫ್ಟ್ ಮೂಲಕ ವಾಪಸ್ ಗ್ರಾ.ಪಂ ಖಾತೆಗೆ ಮಾಡಿದ್ದು‌, ಉಳಿದ 8.3‌ ಲಕ್ಷ ರೂ ಹಣ ಜಮೆ ಮಾಡಿಲ್ಲ ಎನ್ನಲಾಗಿದೆ.

Chamarajangar
ಗುಂಡ್ಲುಪೇಟೆ ಠಾಣೆ

By

Published : Jun 17, 2021, 11:04 AM IST

ಚಾಮರಾಜನಗರ:ಅಧಿಕಾರ ದುರುಪಯೋಗ ಮಾಡಿಕೊಂಡು ಅನುದಾನದ ಹಣವನ್ನು ವಂಚಿಸಿರುವ ಆರೋಪದ ಮೇಲೆ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾ.ಪಂ ಅಧ್ಯಕ್ಷ, ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಾಗಿದೆ.

ಗ್ರಾ.ಪಂ ಅಧ್ಯಕ್ಷ ಬಿ.ವಿ.ಸುದರ್ಶನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೋಜೇಶ್, ಕಂಪ್ಯೂಟರ್ ಆಪರೇಟರ್ ಕಾವ್ಯ ಸಿ ಎಂಬವರ ವಿರುದ್ಧ ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಶ್ರೀಕಂಠರಾಜೇ ಅರಸ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಬಿಜೆಪಿ ಮುಖಂಡ ಹಾಗೂ ಗ್ರಾಪಂ ಅಧ್ಯಕ್ಷ ಬಿ.ವಿ.ಸುದರ್ಶನ್, ಪಿಡಿಒ ಭೋಜೇಶ್, ಕಂಪ್ಯೂಟರ್ ಆಪರೇಟರ್ ಕಾವ್ಯ ಸೇರಿಕೊಂಡು 14 ಮತ್ತು 15 ನೇ ಹಣಕಾಸು ಯೋಜನೆಯಲ್ಲಿ 30,42,830 ಹಣವನ್ನು ಕಾವ್ಯ.ಸಿ ಅವರ ವೈಯಕ್ತಿಕ ಖಾತೆಗೆ ಅಕ್ರಮವಾಗಿ ಜಮೆ ಮಾಡಿಕೊಂಡಿದ್ದಾರೆ. ಬಳಿಕ ಕಾವ್ಯ ಅವರು ಒಟ್ಟು 16.5 ಲಕ್ಷ ಹಣವನ್ನು ಡಿಎಆರ್ ಪೊಲೀಸ್ ಕಾನ್ಸ್​ಟೇಬಲ್ ಶಿವಕುಮಾರ್ 5.5 ಲಕ್ಷ ರೂ.ಗಳನ್ನು ನೆಫ್ಟ್ ಮೂಲಕ ವಾಪಸ್ ಗ್ರಾಪಂ ಖಾತೆಗೆ ಮಾಡಿದ್ದು‌, ಉಳಿದ 8.3‌ ಲಕ್ಷ ರೂ ಹಣ ಜಮೆ ಮಾಡಿಲ್ಲ ಎನ್ನಲಾಗಿದೆ.

31-12-2020 ರಿಂದ 30-04-2021 ರವರೆಗೆ 14 ಮತ್ತು 15 ನೇ ಹಣಕಾಸಿನ ಅವಧಿಯಲ್ಲಿ ಈ ಮೂವರು ಸೇರಿ ಅಧಿಕಾರ ದುರುಪಯೋಗ ಸರ್ಕಾಕ್ಕೆ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details