ಚಾಮರಾಜನಗರ:ಹುಲಿಗೆ ಮೂರು ಸೀಳುನಾಯಿಗಳು ಠಕ್ಕರ್ ಕೊಟ್ಟು ದಾಳಿ ಮಾಡಲು ಮುಂದಾಗಿದ್ದ ಘಟನೆ ಬಂಡೀಪುರ ಸಫಾರಿಯಲ್ಲಿ ಕಳೆದ 29 ರಂದು "ಟೈಗರ್ ರೋಡ್' ಎಂಬಲ್ಲಿ ನಡೆದಿದೆ.
ಸಫಾರಿ ವೇಳೆ ಹುಲಿಗೇ ಠಕ್ಕರ್ ಕೊಟ್ಟು ದಾಳಿಗೆ ಮುಂದಾದ ಸೀಳುನಾಯಿ ಹಿಂಡು.. ! - ಚಾಮರಾಜನಗರ ಹುಲಿ ಸುದ್ದಿ,
ಸೀಳುನಾಯಿ ಹಿಂಡೊಂದು ಹುಲಿಗೆ ಕಾಟ ಕೊಟ್ಟು ಅದರ ಜೊತೆ ಕಾದಾಟ ನಡೆಸಲು ಮುಂದಾಗಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿಯಲ್ಲಿ ಕಂಡು ಬಂತು.
ಸಫಾರಿ ವೇಳೆ ಹುಲಿಗೇ ಠಕ್ಕರ್ ಕೊಟ್ಟು ದಾಳಿಗೆ ಮುಂದಾದ ಸೀಳುನಾಯಿ ಹಿಂಡು
ಹುಲಿಯೊಂದನ್ನು ಕಾಡಿಸಿದ 3 ಸೀಳುನಾಯಿಗಳು ದಾಳಿ ಮಾಡಲು ಮುಂದಾಗಿದ್ದ ವಿಡಿಯೋವನ್ನು ಸಫಾರಿಗೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ಲಾಗಿದೆ. ಹುಲಿ ತಿರುಗಿಬಿದ್ದಾಗ ದೂರ ಓಡುವ ನಾಯಿ ಮತ್ತೆ ದಾಳಿ ಮಾಡಲು ಮುಂದಾಗುತ್ತಿತ್ತು. ಕೊನೆಗೇ ಹುಲಿಯೇ ಪೊದೆಗಳಲ್ಲಿ ಮರೆಯಾಗಿ ದಾಳಿಗೆ ಮುಂದಾಗುತ್ತೆ. ಇದರಿಂದ ಎಚ್ಚೆತ್ತ ಸೀಳು ನಾಯಿಗಳು ಅಲ್ಲಿಂದ ಕಾಲ್ಕಿತ್ತಿವೆ
ಸೀಳುನಾಯಿಗಳು ಗುಂಪಲ್ಲಿದ್ದ ವೇಳೆ ಎಂಥದ್ದೇ ಪ್ರಾಣಿಯ ಮೇಲೂ ದಾಳಿ ಮಾಡುತ್ತವೆ ಎನ್ನುವುದಕ್ಕೆ ಹುಲಿ ಮೇಲೆ ಎರಗಿರುವುದೇ ಸಾಕ್ಷಿಯಾಗಿದೆ.
Last Updated : Jul 31, 2021, 7:09 PM IST