ಚಾಮರಾಜನಗರ :ರಂಗೋಲಿ ಮತ್ತು ಮನೆಗೆ ನೀರು ಹಾಕುವ ಸಂಬಂಧ ಎರಡು ಕುಟುಂಬಗಳ ನಡುವೆ ಹೊಡೆದಾಟವೇ ಆಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸುರಪುರ ಗ್ರಾಮದಲ್ಲಿ ನಡೆದಿದೆ.
ಸುರಪುರ ಗ್ರಾಮದ ಸಹೋದರ ಸಂಬಂಧಿಗಳಾದ ಪುಟ್ಟಸ್ವಾಮಿಗೌಡ, ಸ್ವಾಮಿ, ಸತೀಶ್ ಹಾಗೂ ಲಲಿತಾ ಎಂಬುವರು ಗಾಯಗೊಂಡಿದ್ದಾರೆ. ಎರಡೂ ಕುಟಂಬಗಳು ದಾಯಾದಿಗಳಾಗಿದ್ದು, ರಂಗೋಲಿ ಮತ್ತು ಮನೆ ಮುಂದೆ ನೀರು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಮಾತು ಹೊಡೆದಾಟಕ್ಕೆ ತಲುಪಿದೆ.