ಕೊಳ್ಳೇಗಾಲ: ತಾಲೂಕಿನ ಸಿದ್ದೇಶ್ವರ ಬೆಟ್ಟದ ದೇವಾಲಯದ ಪೂಜೆ ಸಲ್ಲಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಹೊಂಡರಬಾಳು ಗ್ರಾಮದ ಗುರುಸ್ವಾಮಿ, ಸಿದ್ದಲಿಂಗಸ್ವಾಮಿ, ವಿಕಾಸ್, ಜಯಮ್ಮ ಹಾಗೂ ಮತ್ತೊಂದು ಗುಂಪಿನವರಾದ ಶಿವಕುಮಾರ್ ಅಲಿಯಾಸ್ ಅಪ್ಪು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಂಜುಂಡಸ್ವಾಮಿ ಎಂಬುವರ ಗುಂಪು ಏಕಾಏಕಿ ದೇವಾಲಯದ ಬೀಗ ಕೊಡಿ ಎಂದು ಅರ್ಚಕ ಗುರುಸ್ವಾಮಿ ಮತ್ತು ಸಿದ್ದಲಿಂಗಸ್ವಾಮಿ, ವಿಕಾಸ್ ಹಾಗೂ ಜಯಮ್ಮ ಎಂಬುವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಅವರ ಸಂಬಂಧಿಕರಾದ ಶಿವಕುಮಾರ್ ಎಂಬುವರು ಆರೋಪಿಸಿದ್ದಾರೆ.