ಚಾಮರಾಜನಗರ:ಚಳ್ಳಕೆರೆ ಪಟ್ಟಣದ ಕೃಷ್ಣಾ ನರ್ಸಿಂಗ್ ಹೋಮ್ ಬಳಿ ಭ್ರೂಣವೊಂದು ಪತ್ತೆಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷ್ಣಾ ನರ್ಸಿಂಗ್ ಹೋಮ್ ವೈದ್ಯರೇ ಭ್ರೂಣ ಪತ್ತೆ ಹಚ್ಚಿ ಬಳಿಕ ಹತ್ಯೆ ಮಾಡಿದ್ದಾರೆ ಎಂದು ಆಸ್ಪತ್ರೆಯ ವಿರುದ್ಧ ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ.

ಆದರೆ, ಆಸ್ಪತ್ರೆಯ ವೈದ್ಯರು ಆರೋಪವನ್ನು ತಳ್ಳಿಹಾಕಿದ್ದಾರೆ. ಪತ್ತೆಯಾದ ಭ್ರೂಣಕ್ಕೂ, ಆಸ್ಪತ್ರೆಗೂ ಯಾವುದೇ ಸಂಬಂಧವಿಲ್ಲ. ಆಸ್ಪತ್ರೆ ಬಳಿ ಭ್ರೂಣ ಇದೆ ಎಂದ ಮಾತ್ರಕ್ಕೆ ಆರೋಪಿಸುವುದು ಸರಿಯಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಸ್ಥಳಕ್ಕೆ ಆಗಮಿಸಿದ ಚಳ್ಳಕೆರೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಭ್ರೂಣವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.