ಕರ್ನಾಟಕ

karnataka

ETV Bharat / state

ಉಪ ಚುನಾವಣೆಯಲ್ಲಿ ಗೆದ್ದು ಸಿಎಂ ಆಗೋ ವಿಶ್ವಾಸ ಸಿದ್ದರಾಮಯ್ಯನ ಭ್ರಮೆ: ಏಕ ವಚನದಲ್ಲಿ ವಿ.ಶ್ರೀ ಟೀಕೆ - Chamarajanagara latest news

ಉಪಚುನಾವಣೆಯಲ್ಲಿ ಗೆದ್ದು ಮತ್ತೆ ಗದ್ದುಗೆ ಏರುತ್ತೇನೆ ಎಂಬ ಸಿದ್ದು ಮಾತಿಗೆ ವಿ.ಶ್ರೀ ಗುದ್ದು ನೀಡಿ, ಅವರನ್ನ ನೋಡಿದ್ರೆ ನಂಗೆ ಅಯ್ಯೋ ಅನ್ಸುತ್ತೆ. ಉಪಚುನಾವಣೆಯಲ್ಲಿ ಗೆದ್ದು ಸಿಎಂ ಆಗುವುದು ಭ್ರಮೆ ಎಂದು ವ್ಯಂಗ್ಯವಾಡಿದ್ದಾರೆ.

ವ್ಯಂಗ್ಯವಾಡಿದ ವಿ.ಶ್ರೀ

By

Published : Sep 23, 2019, 5:18 PM IST

ಚಾಮರಾಜನಗರ: ಸಿದ್ದರಾಮಯ್ಯನಿಗೆ ಭ್ರಮೆ ಹಿಡಿದಿದೆ, ಆತನನ್ನು ನೋಡಿದರೆ ನನಗೆ ಅಯ್ಯೋ ಅನ್ಸುತ್ತೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಮಾಜಿ ಸಿಎಂ ಅವರನ್ನು ಏಕವಚನದಲ್ಲಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಷ್ಟು ಭಾಷಣ ಮಾಡಿ ಲೋಕಸಭಾ ಚುನಾವಣೆಯಲ್ಲಿ ನೆಲಕಚ್ಚಿದ್ದಾರೆ, ಜನ ಯಾವ ರೀತಿ ಅವರನ್ನು ತಿರಸ್ಕರಿಸಿದ್ದಾರೆ ಎಂದು ಅವರಿಗೆ ಗೊತ್ತು, ಅಂತಹದ್ದರಲ್ಲಿ ಉಪಚುನಾವಣೆಯಲ್ಲಿ ಗೆದ್ದು ಸಿಎಂ ಆಗುವುದು ಭ್ರಮೆ ಎಂದರು.

ವ್ಯಂಗ್ಯವಾಡಿದ ವಿ.ಶ್ರೀ

ನಾನೆ ನಾನೆ ಎಂದು ಹೇಳಿ ಈಗ ಕುಸಿದು ಬಿದ್ದಿದ್ದಾರೆ, ಜನರು ಸೋಲಿಸಿದರು ಅಂತಾರೆ, ಜನರು ಸೋಲಿಸದೇ ದನಗಳು ಸೋಲಿಸುತ್ತಾ?. ಪ್ರಸಾದ್ ನಿಂದ ಸೋತಿಲ್ಲ, ವಿಶ್ವನಾಥ್ ನಿಂದ ಸೋತಿಲ್ಲ, ಜಿಟಿಡಿಯಿಂದ ಸೋತಿಲ್ಲ ಎನ್ನುತ್ತಾರೆ‌. ಮತದಾರರಿಗೆ ಸೋಲಿಸಿ ಎಂದು ಹೇಳಿದ್ದೇ ನಾವು ಎಂದು ಸಿದ್ದು ವಿರುದ್ಧ ಹರಿಹಾಯ್ದರು.

ABOUT THE AUTHOR

...view details