ಚಾಮರಾಜನಗರ:ಸಂಸದ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಅಭಿಮಾನಿಗಳ ನಡುವೆ ಫೇಸ್ಬುಕ್ ವಾರ್ ನಡೆಯುತ್ತಿದ್ದು, ಪರಸ್ಪರ ಕಮೆಂಟ್ ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಸಾಧನೆ ಶೂನ್ಯ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಧ್ರುವನಾರಾಯಣ ಹೇಳಿಕೆ ನೀಡಿದ್ದರು. ಈ ಮಾತನ್ನು ಉಲ್ಲೇಖಿಸಿ ಸಂಸದರ ಬೆಂಬಲಿಗ ಧೀರಜ್ ಪ್ರಸಾದ್, ಜೊತೆಯಲ್ಲೇ ಇದ್ದು ಬತ್ತಿಯಿಟ್ಟು ಪಟಾಕಿ ಸಿಡಿಸುವ ಜಾಯಮಾನದವರಾದ ನಿಮ್ಮ 'ನರಿ ಬುದ್ಧಿ'ಗೆ ಚಾಮರಾಜನಗರದ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಸಂಸದ ಶ್ರೀನಿವಾಸಪ್ರಸಾದ್ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಿಮ್ಮ ಹಾಗೆ ಕೇವಲ ಗುದ್ದಲಿ ಪೂಜೆ, ಶಂಕುಸ್ಥಾಪನೆಯ ಫೋಟೋಗಳನ್ನು ತೆಗೆಸಿಕೊಂಡು ಪ್ರಚಾರ ಮಾಡುವುದಕ್ಕೆ ಅವರು ಸಂಸತ್ತಿಗೆ ಹೋಗಿಲ್ಲ. ಅವರು ಹೋಗಿರುವುದು ಕಾನೂನು, ಶಾಸನಗಳನ್ನು ರಚಿಸುವುದಕ್ಕೆ. ಕ್ಷೇತ್ರದ ಹಿಂದುಳಿದ, ದಲಿತ, ನಿರ್ಗತಿಕರ ಪರ ಧ್ವನಿ ಎತ್ತಲೆಂದು ತಿರುಗೇಟು ನೀಡಿದ್ದಾರೆ.
ಸಂಸದ ವಿ.ಶ್ರೀ, ಮಾಜಿ ಸಂಸದ ಧ್ರುವ ಬೆಂಬಲಿಗರ ನಡುವೆ ಎಫ್ಬಿ ವಾರ್ ಧೀರಜ್ ಪೋಸ್ಟ್ಗೆ ಕೆಂಡಾಮಂಡಲವಾದ ಧ್ರುವನಾರಾಯಣ ಅವರ ಅಭಿಮಾನಿಗಳು, ಧೀರಜ್ ಓರ್ವ ಗ್ರಾಪಂ ಸದಸ್ಯನೂ ಅಲ್ಲ. ಮಾವನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ನೀವು. ನಿಮ್ಮ ಮಾವನವರು ಸಂಸದರಾದ ಮೇಲೆ ಅವರ ಸಾಧನೆ ಕೇವಲ ಶೂನ್ಯವಾಗಿದೆ. ಪಾರ್ಲಿಮೆಂಟ್ನಲ್ಲಿ ಒಂದೇ ಒಂದು ಚರ್ಚೆಯಲ್ಲಿ ಅವರು ಭಾಗವಹಿಸಿಲ್ಲ. ಕ್ಷೇತ್ರದಲ್ಲೂ ಶೂನ್ಯ. ಲೋಕಸಭೆಯಲ್ಲೂ ಅವರ ಸಾಧನೆ ಶೂನ್ಯವಾಗಿದೆ. 5 ಬಾರಿ ಕಾಂಗ್ರೆಸ್ನಿಂದ ಸಂಸದರಾಗಿ, 2 ಬಾರಿ ಕಾಂಗ್ರೆಸ್ನಿಂದ ಶಾಸಕರಾಗಿ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ ಅವಕಾಶವಾದಿಯಾಗಿದ್ದಾರೆ. ಜನರು ಇಲ್ಲಿಯವರಿಗೆ ಸುಮ್ನೆ ಇದ್ರು. ಅದೂ ಆರೋಗ್ಯ ಮತ್ತು ಕೊರೊನಾ ಎಂಬ ಮಹಾಮಾರಿ ಇದೆ ಅಂತ. ಆದ್ರೆ ಸಂಸದರು ಪಕ್ಷ ಸಂಘಟನೆ ಮಾಡಲು ಮಾತ್ರ ಬರುತ್ತಾರೆ. ಅದೇ ಜನರ ಸಮಸ್ಯೆ ಕೇಳಲು, ಅಭಿವೃದ್ಧಿ ಮಾಡಲು ಬರಲ್ಲ. 2008ರ ಚುನಾವಣೆಯಲ್ಲಿ ನೀವು ಎಲ್ಲಿ ಇದ್ರಿ ಗೊತ್ತಿಲ್ಲ. ಆದ್ರೆ ಮನೆಯಲ್ಲಿ ಇದ್ದವರನ್ನ ಚುನಾವಣೆಯಲ್ಲಿ ಬೀದಿ ಬೀದಿ, ಹಳ್ಳಿ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿ ಗೆಲ್ಲಿಸಿದ್ದು ಯಾರು? ಗೊತ್ತಾ ನಿಮಗೆ ಎಂದು ಟಾಂಗ್ ಕೊಟ್ಟಿದ್ದಾರೆ.
ಸಂಸದ ವಿ.ಶ್ರೀ, ಮಾಜಿ ಸಂಸದ ಧ್ರುವ ಬೆಂಬಲಿಗರ ನಡುವೆ ಎಫ್ಬಿ ವಾರ್ ಧ್ರುವನಾರಾಯಣ್ ಗುದ್ದಲಿ ಪೂಜೆ ಮಾಡ್ತಾ ಇದ್ರೂ ಅಂದ್ರೆ ಅದಕ್ಕೆ ಅನುದಾನ ತರುತ್ತಿದ್ದ ಅಭಿವೃದ್ಧಿ ಹರಿಕಾರ ಎಂದು ಸಾಬೀತಾಯಿತು. ಧ್ರುವನಾರಾಯಣ ಅನುದಾನದಲ್ಲಿ 100%ರಷ್ಟು ಕೆಲಸ ಮಾಡಿದ ಕೀರ್ತಿ ಹಾಗೂ ನಂಬರ್ 1 ಸಂಸದರಾಗಿದ್ದರು. ಧ್ರುವನಾರಾಯಣ್ ಮಾಜಿಯಾದರೂ ಎಲ್ಲರ ಬಾಯಲ್ಲೂ ಗುಣಗಾನಕ್ಕೆ ಒಳಪಟ್ಟಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಸಂಸದ ವಿ.ಶ್ರೀ, ಮಾಜಿ ಸಂಸದ ಧ್ರುವ ಬೆಂಬಲಿಗರ ನಡುವೆ ಎಫ್ಬಿ ವಾರ್ ಇದೇ ವೇಳೆ ವಿ.ಶ್ರೀ. ಬೆಂಬಲಿಗ ಪ್ರಜ್ವಲ್ ಶಶಿ, ಒಂದು ಕಥೆಯನ್ನೇ ಬರೆದು ಅರಮನೆ ನೋಡಿಕೊ ಎಂದರೆ ಸಾಮ್ರಾಜ್ಯವನ್ನೇ ಕಬಳಿಸಲು ಮುಂದಾಗಿದ್ದರು ಧ್ರುವನಾರಾಯಣ್ ಎಂದು ಜರಿದಿದ್ದಾರೆ. ಎರಡು ಕಡೆಯಿಂದ ಪರ-ವಿರೋಧ ಕಮೆಂಟ್ಗಳು ಜೋರಾಗಿದ್ದು, ಫೇಸ್ಬುಕ್ ವಾರ್ ಮುಂದುವರೆದಿದೆ.