ಚಾಮರಾಜನಗರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯೇ ಮಗನನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿಯಲ್ಲಿ ನಡೆದಿದೆ.
ಆಸ್ತಿ ವಿವಾದ: ಮಗನನ್ನು ಕೊಂದು ಪೊಲೀಸ್ ಠಾಣೆಗೆ ಶರಣಾದ ತಂದೆ - ಆಸ್ತಿಗಾಗಿ ಮಗನನ್ನು ಕೊಂದ ತಂದೆ
ಜಮೀನು ಹಾಗೂ ಇತರೆ ಆಸ್ತಿ ವಿಚಾರವಾಗಿ ಹಲವು ದಿನಗಳಿಂದ ತಂದೆ-ಮಕ್ಕಳ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ. ಇಂದು ಮಲ್ಲಿಕಾರ್ಜುನ ಮರ ಕಡಿಯಲು ತೆರಳಿದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಂದಿರುವುದಾಗಿ ತಿಳಿದುಬಂದಿದೆ.
![ಆಸ್ತಿ ವಿವಾದ: ಮಗನನ್ನು ಕೊಂದು ಪೊಲೀಸ್ ಠಾಣೆಗೆ ಶರಣಾದ ತಂದೆ Murder](https://etvbharatimages.akamaized.net/etvbharat/prod-images/768-512-7801961-thumbnail-3x2-jay.jpg)
ಕೊಲೆ
ಗ್ರಾಮದ ಮಲ್ಲಿಕಾರ್ಜುನ (48) ಮೃತ ದುರ್ದೈವಿ. ತಂದೆ ಮಹಾದೇವಪ್ಪ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಜಮೀನು ಹಾಗೂ ಇತರೆ ಆಸ್ತಿ ವಿಚಾರವಾಗಿ ಹಲವು ದಿನಗಳಿಂದ ತಂದೆ- ಮಕ್ಕಳ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದ್ದು, ಇಂದು ಮಲ್ಲಿಕಾರ್ಜುನ ಮರ ಕಡಿಯಲು ತೆರಳಿದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಂದಿರುವುದಾಗಿ ತಿಳಿದುಬಂದಿದೆ.
ತಂದೆಯಿಂದಲೇ ಮಗನ ಹತ್ಯೆ
ಹತ್ಯೆ ಮಾಡಿದ ಬಳಿಕ ಮಹಾದೇವಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಈತನ ಸಹೋದರನೂ ಕೊಲೆ ಮಾಡಲು ಸಹಕರಿಸಿದ್ದ ಎನ್ನಲಾಗಿದ್ದು, ಖಚಿತವಾಗಿಲ್ಲ. ಸದ್ಯ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jun 28, 2020, 10:52 AM IST