ಕರ್ನಾಟಕ

karnataka

ETV Bharat / state

‘ಅಮ್ಮನನ್ನು ಚೆನ್ನಾಗಿ‌ ನೋಡಿಕೋ’.. ಮಗಳಿಗೆ ಕರೆ ಮಾಡಿ ನದಿಗೆ ಹಾರಿ ತಂದೆ ಆತ್ಮಹತ್ಯೆ - ಮನೆ ಕರೆ ಮಾಡಿ ಆತ್ಮಹತ್ಯೆ

ಎರಡು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಗೆ ಕರೆ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ವೆಸ್ಲಿ ಸೇತುವೆ ಸಮೀಪದ ಕಡಗದ್ದೆ ಕಾವೇರಿ ನದಿ‌ ದಡದಲ್ಲಿ ಶವ ಪತ್ತೆಯಾಗಿದೆ.

father-commits-suicide-after-called-to-his-daughter
ಮಗಳಿಗೆ ಕರೆ ಮಾಡಿ ನದಿಗೆ ಹಾರಿ ತಂದೆ ಆತ್ಮಹತ್ಯೆ

By

Published : Sep 9, 2021, 6:30 AM IST

ಕೊಳ್ಳೇಗಾಲ (ಚಾಮರಾಜನಗರ): ಮಗಳಿಗೆ ಕರೆ ಮಾಡಿ ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವನಸಮುದ್ರ ವೆಸ್ಲಿ ಸೇತುವೆ ಬಳಿ ನಡೆದಿದೆ. ಕರೆ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ, ಇದೀಗ ಆತನ ಶವ ಪತ್ತೆಯಾಗಿದೆ.

ಪಟ್ಟಣದ ಬಸವೇಶ್ವರ ನಗರ ನಿವಾಸಿ ಸುಂದರರಾಜು(55) ಮೃತ ವ್ಯಕ್ತಿ. ಈತ ವೃತ್ತಿಯಲ್ಲಿ ವೀಳ್ಯದೆಲೆ ವ್ಯಾಪಾರಿಯಾಗಿದ್ದು ಸೆ.6 ರಂದು ಎಂದಿನಂತೆ ವ್ಯಾಪಾರ ಮಾಡಲು ಜಾಗೇರಿ ಕಡೆ ತೆರಳಿದ್ದರು. ಬೆಳಗ್ಗೆ 8.30ರ ಸಮಯದಲ್ಲಿ ತನ್ನ ಪುತ್ರಿಗೆ ಕರೆ ಮಾಡಿ ಅಮ್ಮನನ್ನು ಚೆನ್ನಾಗಿ ನೋಡಿಕೋ ನಾನು ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ನದಿಗೆ ಹಾರುತ್ತಿದ್ದೇನೆ ಎಂದು ತಿಳಿಸಿ ಫೋನ್ ಸ್ವೀಚ್ಡ್​​ ಆಫ್ ಮಾಡಿಕೊಂಡಿದ್ದರು‌.

ಈ ಘಟನೆಯಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಂದರರಾಜು ಸ್ಕೂಟರ್ ವೆಸ್ಲಿ ಸೇತುವೆ ಬಳಿ ಪತ್ತೆಯಾಗಿತ್ತು. ಆದರೆ, ಸುಂದರರಾಜು ಸುಳಿವು ಸಿಕ್ಕಿರಲಿಲ್ಲ. ಇದೀಗ ಎರಡು ದಿನದ ಬಳಿಕ ವೆಸ್ಲಿ ಸೇತುವೆ ಸಮೀಪದ ಕಡಗದ್ದೆ ಕಾವೇರಿ ನದಿ‌ ದಡದಲ್ಲಿ ಸುಂದರ್ ರಾಜ್ ಮೃತದೇಹ ಪತ್ತೆಯಾಗಿದೆ.

ಓದಿ:ಮಂಗಳೂರು: ಉಗ್ರರ ಪರ ಗೋಡೆ ಬರಹ ಬರೆದ ಇಬ್ಬರು ಆರೋಪಿಗಳಿಗೆ ಜಾಮೀನು

ABOUT THE AUTHOR

...view details