ಕರ್ನಾಟಕ

karnataka

ETV Bharat / state

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು - ಈಟಿವಿ ಭಾರತ ಕನ್ನಡ

ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ತಂದೆ-ಮಗ ಮೃತಪಟ್ಟಿದ್ದಾರೆ.

father-and-son-died-after-tree-fell-on-car-in-chamarajanagar
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು

By

Published : Aug 5, 2022, 8:44 PM IST

Updated : Aug 5, 2022, 8:52 PM IST

ಚಾಮರಾಜನಗರ: ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಆಲದ ಮರ ಬಿದ್ದು ತಂದೆ-ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರದಲ್ಲಿ ನಡೆದಿದೆ. ಸಂತೆಮರಹಳ್ಳಿ ಗ್ರಾಮದ ರಾಘವೇಂದ್ರ ಬಡಾವಣೆಯ ಎಚ್.ಪಿ.ರಾಜು(47) ಹಾಗೂ ಪುತ್ರ ಹೆಚ್.ಆರ್.ಶರತ್ (15) ಮೃತಪಟ್ಟಿದ್ದಾರೆ.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು

ರಾಜು ಮತ್ತು ಶರತ್​ ತಮ್ಮ ಸಂಬಂಧಿಕರ ಮನೆಗೆ ತೆರಳುವಾಗ ದುರ್ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ದೇಹಗಳು ಕಾರಿನಲ್ಲೇ ಸಿಲುಕಿಕೊಂಡಿದ್ದವು. ಸಂತೇಮರಹಳ್ಳಿ ಪಿಎಸ್ಐ ತಾಜುದ್ದಿನ್ ನೇತೃತ್ವದಲ್ಲಿ ಪೊಲೀಸರು ಜೆಸಿಬಿ ಸಹಾಯದಿಂದ ಶವಗಳನ್ನು ಹೊರತೆಗೆದರು.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು

ಇಬ್ಬರ ಮೃತದೇಹಗಳನ್ನೂ ಚಾಮರಾಜನಗರ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಗನ ಮೇಲೆ ಚಿರತೆ ದಾಳಿ; ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

Last Updated : Aug 5, 2022, 8:52 PM IST

ABOUT THE AUTHOR

...view details