ಕರ್ನಾಟಕ

karnataka

ETV Bharat / state

ಗಣಿಗಾರಿಕೆ ಮಟ್ಟಹಾಕಲು ಸುಮಲತಾ ಚಾಮರಾಜನಗರಕ್ಕೆ ಬರಲಿ: ರೈತರ ಒತ್ತಾಯ - Chamarajanagar

ಜಿಲ್ಲೆಯಲ್ಲಿ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಸಂಸದೆ ಸುಮಲತಾ ಅವರು ಚಾಮರಾಜನಗರಕ್ಕೆ ಬರಬೇಕು. ಇಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹೋರಾಟ ರೂಪಿಸಬೇಕು ಎಂದು ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Chamarajanagar
ರೈತ ಸಂಘದ ಕಾರ್ಯಕರ್ತರು

By

Published : Jul 17, 2021, 5:18 PM IST

ಚಾಮರಾಜನಗರ:ಮಂಡ್ಯದ ಅಕ್ರಮ ಗಣಿಗಾರಿಕೆ ಮಟ್ಟ ಹಾಕಲು ಮುಂದಾಗಿರುವ ಸಂಸದೆ ಸುಮಲತಾ ಅವರು ಚಾಮರಾಜನಗರಕ್ಕೂ ಬರಬೇಕು. ಇಲ್ಲಿಯೂ ಹೋರಾಟ ರೂಪಿಸಬೇಕು ಎಂದು ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ರೈತ ಸಂಘದ ಮುಖಂಡ ಡಾ.ಗುರುಪ್ರಸಾದ್ ಮಾತನಾಡಿ, ಕರ್ನಾಟಕದಲ್ಲಿ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಚಾಮರಾಜನಗರದಲ್ಲಿ. ಶೇ.70-80 ರಷ್ಟು ಕರಿ ಕಲ್ಲು ಕ್ವಾರಿಗಳು, ಕ್ರಷರ್​​ಗಳಿಗೆ ಯಾವುದೇ ಅನುಮತಿ ಇಲ್ಲ ಎನ್ನಲಾಗುತ್ತಿದ್ದರೂ, ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.

ರೈತ ಸಂಘದ ಮುಖಂಡ ಡಾ.ಗುರುಪ್ರಸಾದ್

ಜಿಲ್ಲೆಯಲ್ಲಿ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ, ಸಂಸದೆ ಸುಮಲತಾ ಅವರು ಚಾಮರಾಜನಗರಕ್ಕೆ ಬರಬೇಕು. ಇಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹೋರಾಟ ರೂಪಿಸಬೇಕು. ರೈತ ಸಂಘ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದ್ದು, ಮುಕ್ತ ಮನಸ್ಸಿನಿಂದ ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು.

ಚಾಮರಾಜನಗರ ತಾಲೂಕಿನ ಗೋವಿಂದವಾಡಿ ಗ್ರಾಮದ ಸರ್ವೇ ನಂ 106ರಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ನವೀಕರಣಗೊಳಿಸಬಾರದು. ಜತೆಗೆ ಗ್ರಾಮಗಳ ಹತ್ತಿರ ಸಿಡಿಮದ್ದು ದಾಸ್ತಾನಿಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಇದೇ ವೇಳೆ ಡಿಸಿ ಅವರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details