ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ಉತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಶೀಘ್ರವೇ ನೀರು ತುಂಬುವಂತೆ ರೈತರು ಬಿಗಿಪಟ್ಟು ಹಿಡಿದು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ವಡ್ಡಗೆರೆ ಕೆರೆಗೆ ನೀರು ತುಂಬಿಸಲು ರೈತರ ಪಟ್ಟು.. ಅಹೋರಾತ್ರಿ ಧರಣಿ ಕುಳಿತ ಅನ್ನದಾತರು! - Kannada news
ವಡ್ಡಗೆರೆ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಅಹೋರಾತ್ರಿ ಧರಣಿ ನಡೆಸಿದ್ದಾರೆ. 15 ದಿನಗಳಲ್ಲಿ ನೀರು ತುಂಬಿಸಲಾಗುವುದೆಂಬ ಅಧಿಕಾರಿಗಳ ಭರವಸೆಗೂ ಜಗ್ಗದ ರೈತರು ನೀರು ಬಿಡುವ ತನಕ ಧರಣಿ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.
ತೆರಕಣಾಂಬಿ ಬಳಿಯ ಉತ್ತೂರು ಕೆರೆಯಂಗಳದಲ್ಲಿ ನೂರಾರು ರೈತರು ರೈತಸಂಘದ ನೇತೃತ್ವದಲ್ಲಿ ವಡ್ಡಗೆರೆ ಕೆರೆಗೆ ನೀರು ತುಂಬಿಸುವಂತೆ ಅಹೋರಾತ್ರಿ ಧರಣಿ ನಡೆಸಿದ್ದಾರೆ. 15 ದಿನಗಳಲ್ಲಿ ನೀರು ತುಂಬಿಸಲಾಗುವುದೆಂಬ ಅಧಿಕಾರಿಗಳ ಭರವಸೆಗೂ ಜಗ್ಗದ ರೈತರು ನೀರು ಬಿಡುವ ತನಕ ಧರಣಿ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.
ಧರಣಿಗೂ ಮೊದಲು ತೆರಕಣಾಂಬಿ ಗ್ರಾಮದೊಳಗೆ ರೈತರು ಪಾದಯಾತ್ರೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಸಿ ಎಸ್ ನಿರಂಜನಕುಮಾರ್ ಹಾಗು ಜಿಲ್ಲಾಡಳಿತದ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 1 ವಾರ 15 ದಿನ ಕಾಲಾವಕಾಶದ ಭರವಸೆಗೆ ಪ್ರತಿರೋಧ ವ್ಯಕ್ತಪಡಿಸಿದ ರೈತರು, ನೀರು ಬಿಡುವುದಾದರೆ ಇಂದೋ, ನಾಳೆಯೋ ಬಿಡಿ ಅದು ಬಿಟ್ಟು ವಾರ ಕಾಲಾವಕಾಶ ಕೇಳಿದರೆ ನಾವು ಧರಣಿ ಮುಂದುವರಿಸುತ್ತೇವೆ ಎಂದು ಧರಣಿ ಮುಂದುವರಿಸಿದ್ದಾರೆ. ರೈತಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್, ಕಬ್ಬುಬೆಳಗಾರರ ಸಂಘದ ಭಾಗ್ಯರಾಜ್ ಇನ್ನಿತರರು ಉಪಸ್ಥಿತರಿದ್ದರು.