ಚಾಮರಾಜನಗರ: ಮಾಜಿ ಸಚಿವ ದಿವಂಗತ ಮಹದೇವಪ್ರಸಾದ್ ವಿರುದ್ಧ ರೈತರು ತಿರುಗಿ ಬಿದ್ದಿದ್ದು, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಜಲ್ಲಿ ಕ್ರಷರ್ ವಾಹನ ಸಂಚಾರ: ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ - undefined
ತಾಲೂಕು ಅಧಿಕಾರಿಗಳು ದಲಿತರ ಭೂಮಿಯನ್ನು ಗೋಮಾಳ ಎಂದು ದಾಖಲೆ ಸೃಷ್ಟಿಸಿ, ಜಿಲ್ಲಾ ಪಂಚಾಯತ್ ಮೂಲಕ ಅಕ್ರಮವಾಗಿ ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಗೆ ಸೇರಿದ ಹಿರಿಕಾಟಿ ಗ್ರಾಮದಲ್ಲಿ ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್ ಜಲ್ಲಿ ಕ್ರಷರ್ ನಡೆಸುತ್ತಿದ್ದಾರೆ. ಇಲ್ಲಿನ ವಾಹನಗಳು ಹಿಂದೆ ಚಿಕ್ಕುಂಡಿ, ದೊಡ್ಡುಂಡಿ ಮಾರ್ಗವಾಗಿ ಸಂಚರಿಸುತ್ತಿದ್ದವು. ಆದರೆ, ಅಲ್ಲಿನ ಗ್ರಾಮಸ್ಥರು ವಾಹನಗಳ ಓಡಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಜಲ್ಲಿ ಕ್ರಷರ್ನ ವಾಹನಗಳು ಹಿರಿಕಾಟಿ ಗ್ರಾಮದ ದಲಿತ ಕುಟುಂಬಗಳು ಹಿಡುವಳಿ ಮಾಡಿಕೊಂಡು ಬಂದಿದ್ದ ಸರ್ವೆ ನಂ.271, 341 ಸೇರಿದಂತೆ ಹತ್ತಕ್ಕೂ ಹೆಚ್ಚು ಜಮೀನುಗಳ ಮೇಲೆ ಸಂಚರಿಸಲು ಶುರು ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಭೂ ಮಾಪನ ಅಧಿಕಾರಿಗಳು, ತಹಸೀಲ್ದಾರ್, ಪೊಲೀಸರು ಶಾಮೀಲಾಗಿ ದಲಿತರ ಭೂಮಿಯನ್ನು ಗೋಮಾಳ ಎಂದು ದಾಖಲೆ ಸೃಷ್ಟಿಸಿ, ಜಿಲ್ಲಾ ಪಂಚಾಯತ್ ಮೂಲಕ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ ಎಂದು 40ಕ್ಕೂ ಹೆಚ್ಚು ದಲಿತ ಕುಟುಂಬಗಳ ರೈತರು ಆರೋಪಿಸಿದ್ದಾರೆ.