ಚಾಮರಾಜನಗರ :ಸಾಲ ಬಾಧೆ ತಾಳಲಾರದೇ ರೈತನೋರ್ವ ಭತ್ತದ ಗದ್ದೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜ್ಯೋತಿ ಗೌಡನಪುರ ಗ್ರಾಮದ ಮೇಲ್ಮಾಳ ಎಂಬಲ್ಲಿ ನಡೆದಿದೆ.
ಬಂಪರ್ ಬೆಳೆಗೆ ಪಾಪರ್ ಬೆಲೆ.. ಉತ್ತು ಬಿತ್ತಿದ್ದ ಜಮೀನಿನಲ್ಲೇ ರೈತ ಆತ್ಮಹತ್ಯೆ.. - ರೈತ ಆತ್ಮಹತ್ಯೆ
ಬ್ಯಾಂಕ್ ಹಾಗೂ ಕೈಸಾಲ ಸೇರಿದಂತೆ 6 ಲಕ್ಷ ರೂಪಾಯಿಗೂ ಹೆಚ್ಚು ಸಾಲ ರೈತ ಪುಟ್ಟಣ್ಣನ ಮೇಲಿತ್ತು ಎಂದು ತಿಳಿದು ಬಂದಿದೆ. ಸದ್ಯ,ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ರೈತ ಆತ್ಮಹತ್ಯೆ
ಜ್ಯೋತಿಗೌಡನಪುರ ಗ್ರಾಮದ ಪುಟ್ಟಣ್ಣ(37) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು. ಬಂಪರ್ ಬೆಳೆ ಬಂದರೂ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಕಳೆದ 1 ವರ್ಷದಿಂದಲೂ ಸಾಲದ ಸುಳಿಯಲ್ಲಿದ್ದರಿಂದ ಬೇಸತ್ತ ಪುಟ್ಟಣ್ಣ ಇಂದು ಸಂಜೆ ಭತ್ತದ ಗದ್ದೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ಯಾಂಕ್ ಹಾಗೂ ಕೈಸಾಲ ಸೇರಿದಂತೆ 6 ಲಕ್ಷ ರೂಪಾಯಿಗೂ ಹೆಚ್ಚು ಸಾಲ ರೈತ ಪುಟ್ಟಣ್ಣನ ಮೇಲಿತ್ತು ಎಂದು ತಿಳಿದು ಬಂದಿದೆ. ಸದ್ಯ,ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.