ಚಾಮರಾಜನಗರ :ಜಮೀನಿನಿಂದ ಹಿಂತಿರುಗಿ ಬಂದ ಅಪ್ಪು ಅಭಿಮಾನಿಯೋರ್ವ ಪುನೀತ್ ಸಾವಿನ ಸುದ್ದಿ ನೋಡುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ನಡೆದಿದೆ.
ಮುನಿಯಪ್ಪ(28) ಮೃತ ಅಪ್ಪು ಅಭಿಮಾನಿ. ಜಮೀನಿನಿಂದ ಊಟಕ್ಕೆ ಬಂದಿದ್ದ ಈತ ಟಿವಿ ಹಾಕಿದ ವೇಳೆ ಪುನೀತ್ ಸಾವಿನ ಸುದ್ದಿ ಪ್ರಸಾರವಾಗಿದೆ. ನೆಚ್ಚಿನ ನಟನ ಸಾವಿನ ಸುದ್ದಿ ನೋಡುತ್ತಿದ್ದಂಯೇ ಮುನಿಯಪ್ಪ ಕುಸಿದು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತಾದರೂ ಅದಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.