ಕೊಳ್ಳೇಗಾಲ: ಕೊಳ್ಳೇಗಾಲದ ಮುಡಿಗುಂಡ ಗ್ರಾಮದ ಅಭಿಮಾನಿಯೋರ್ವ ತನ್ನ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನೂರಾರು ಮಂದಿಗೆ ಬಾಡೂಟ ಹಾಕಿಸುವ ಮೂಲಕ ಸಂಭ್ರಮಿಸಿ ನಟನಿಗೆ ಶುಭ ಕೋರಿದರು.
ನಟ ದರ್ಶನ್ ಹುಟ್ಟುಹಬ್ಬಕ್ಕೆ ಬಾಡೂಟ ಹಾಕಿಸಿದ ಕೊಳ್ಳೇಗಾಲದ ಅಭಿಮಾನಿ - ಚಾಲೆಂಜಿಗ್ ಸ್ಟಾರ್ ದರ್ಶನ್ ಜನ್ಮದಿನ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಕೊಳ್ಳೇಗಾಲದ ಮುಡಿಗುಂಡ ಗ್ರಾಮದ ಅಭಿಮಾನಿಯೊಬ್ಬರು ಎಂಬುವರು ಕೇಕ್ ಕತ್ತರಿಸಿ ನೂರಾರು ಮಂದಿಗೆ ಬಾಡೂಟ ಹಾಕಿಸುವ ಮೂಲಕ ಸಂಭ್ರಮಿಸಿದರು.

ಚಾಲೆಂಜಿಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿ
ಚಾಲೆಂಜಿಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿ
ನಟನ ಹುಟ್ಟುಹಬ್ಬವನ್ನು ರಾಜ್ಯದ ಹಲವೆಡೆ ಅಭಿಮಾನಿಗಳು ಆಚರಿಸಿದ್ದು, ಅದರಂತೆ ಮುಡಿಗುಂಡ ಗ್ರಾಮದ ಅಭಿಮಾನಿ ಸಾಗರ್ ಕಳೆದ 6 ವರ್ಷದಿಂದ ನೆಚ್ಚಿನ ಕಲಾವಿದನ ಜನ್ಮದಿನ ಆಚರಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ತನ್ನ ಮನೆ ಮುಂದೆ ದರ್ಶನ್ ಅವರ ಕಟೌಟ್ ಹಾಕಿ, ಮನೆಯನ್ನು ದೀಪಾಲಂಕಾರ, ತಳಿರು ತೋರಣಗಳಿಂದ ಶೃಂಗರಿಸಿ ಊರಿನ ಯುವಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿದ್ದಾರೆ. ಅಷ್ಟೇ ಅಲ್ಲದೇ, 200ಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ್ದಾರೆ. ಕುಟುಂಬಸ್ಥರು ಕೂಡ ಇವರ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.