ಚಾಮರಾಜನಗರ: ಮೈಸೂರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿದಂತೆ ಬಂಧಿತನಾಗಿರುವ ತಮಿಳುನಾಡಿನ ತಾಳವಾಡಿ ಸಮೀಪದ ಸುಸೈಪುರಂ ಗ್ರಾಮದ ಕೂಲಿ ಕಾರ್ಮಿಕನ ಕುಟುಂಬಸ್ಥರು ಮನೆ ಖಾಲಿ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ 28 ವರ್ಷದ ಕೂಲಿ ಕಾರ್ಮಿಕನನ್ನು ಮೈಸೂರಿನ ಪೊಲೀಸರ ತಂಡ ಬಂಧಿಸಿ ಕರೆದೊಯ್ಯುತ್ತಿದ್ದಂತೆ ಮನೆಯಲ್ಲಿದ್ದ ತಾಯಿ ಹಾಗೂ ಇತರೆ ಸಂಬಂಧಿಕರು ಮರ್ಯಾದೆಗೆ ಅಂಜಿ ಮನೆ ಖಾಲಿ ಮಾಡಿದ್ದು, ಎಲ್ಲಿ ಹೋಗಿದ್ದಾರೆಂಬ ಮಾಹಿತಿ ತಿಳಿದು ಬಂದಿಲ್ಲ.
ಮೈಸೂರು ಅತ್ಯಾಚಾರ ಆರೋಪಿ ಬಂಧನ: ಮನೆ ಖಾಲಿ ಮಾಡಿದ ಕುಟುಂಬಸ್ಥರು ಬಂಧಿತ ಆರೋಪಿಯು ಆಟೋ, ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದನು. ಕೂಲಿ ಕೆಲಸಕ್ಕೂ ಹೋಗುತ್ತಿದ್ನುದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆತ ಅವಿವಾಹಿತನಾಗಿದ್ದಾನೆಂದು ತಿಳಿದು ಬಂದಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ಈತನ ತಂದೆ ಮರಣ ಹೊಂದಿದ್ದು, ಕೆಲಸಕ್ಕಾಗಿ ಹಲವು ಊರುಗಳಲ್ಲಿ ಅಲೆಯುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಓದಿ:Gangrape ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳು ಸಾಕಷ್ಟಿವೆ: ಡಿಜಿಪಿ ಪ್ರವೀಣ್ ಸೂದ್