ಕರ್ನಾಟಕ

karnataka

ETV Bharat / state

10 ವರ್ಷ ಪ್ರೀತಿಸಿ ಯುವತಿಗೆ ಕೈಕೊಟ್ಟ ಆರೋಪ: ಕಾನ್ಸ್​​​ಟೇಬಲ್ ಬಂಧನ - police constable arrested

ಪೊಲೀಸ್ ಕಾನ್ಸ್​​​ಟೇಬಲ್​ ಪ್ರಸಾದ್ ಯುವತಿಯೋರ್ವಳನ್ನು ಬರೋಬ್ಬರಿ 10 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ಕೈಕೊಟ್ಟಿದ್ದಾನೆಂದು ಯುವತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಕಾನ್ಸ್​​ಟೇಬಲ್ ಪ್ರಸಾದ್​ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

fake love case; police constable arrested
10 ವರ್ಷ ಪ್ರೀತಿಸಿ ಕೈಕೊಟ್ಟ ಆರೋಪ: ಕಾನ್ಸ್​​​ಟೇಬಲ್ ಬಂಧನ!

By

Published : Nov 17, 2020, 12:13 PM IST

Updated : Nov 17, 2020, 12:27 PM IST

ಚಾಮರಾಜನಗರ: 10 ವರ್ಷಗಳ ಕಾಲ ಪ್ರೀತಿ ಪ್ರೇಮದ ನಾಟಕವಾಡಿ ಬಳಿಕ ಕೈಕೊಟ್ಟಿರುವ ಆರೋಪದಡಿ ಪೊಲೀಸ್ ಕಾನ್ಸ್​​​ಟೇಬಲ್​ ಓರ್ವನನ್ನು ಬಂಧಿಸಿರುವ ಘಟನೆ ತಾಲೂಕಿನ ಇರಸವಾಡಿ ಸುತ್ತೂರು ಗ್ರಾಮದಲ್ಲಿ ನಡೆದಿದೆ.

ಸಂತೇಮರಹಳ್ಳಿ ಪೊಲೀಸ್ ಕಾನ್ಸ್​​​ಟೇಬಲ್​ ಪ್ರಸಾದ್​​ ಬಂಧಿತ ಆರೋಪಿ. ಪ್ರಸಾದ್ ಅದೇ ಗ್ರಾಮದ ಯುವತಿಯನ್ನು ಬರೋಬ್ಬರಿ 10 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ದೈಹಿಕ ತೃಷೆ ತೀರಿಸಿಕೊಂಡ ನಂತರ ಕೈಕೊಟ್ಟಿದ್ದಾನೆಂದು ಯುವತಿ ಹಾಗೂ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ಯುವತಿ ಸಹೋದರನಿಂದ ಆರೋಪ

ಹುಡುಗಿ ಮನೆಯವರು ಬೇರೆಯವರೊಂದಿಗೆ ಮದುವೆ ಮಾಡಲು ಮುಂದಾದಾಗ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಅವರ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸಿ ಮದುವೆ ಮುರಿಯುತ್ತಿದ್ದ ಎನ್ನಲಾಗ್ತಿದೆ. ಆದ್ರೆ ಇದೀಗ ಆ ಹುಡುಗಿಗೆ ಕೈಕೊಟ್ಟು ಬೇರೆಯವಳೊಂದಿಗೆ ದೇಗುಲದಲ್ಲಿ ಮದುವೆಯಾಗಿ ನಮಗೆ ವಂಚಿಸಿದ್ದಾನೆ ಎಂದು ಯುವತಿಯ ಸಹೋದರ ದೂರಿದ್ದಾರೆ.

ಪೊಲೀಸರ ಕುಮ್ಮಕ್ಕು?: ಹುಡುಗ ಮೋಸ ಮಾಡಿದ ದೂರನ್ನು ನ.9 ರಂದು ದಾಖಲಿಸಿದ್ದು, ಆತ 13 ರಂದು ಮದುವೆಯಾಗಿದ್ದಾನೆ. ಯುವತಿಗೆ ಅನ್ಯಾಯವಾಗಲು ಚಾಮರಾಜನಗರ ಪೂರ್ವ ಠಾಣೆ ಪೊಲೀಸರ ಕುಮ್ಮಕ್ಕು ಸಹ ಕಾರಣ. ದೂರು ನೀಡಿದ ದಿನದಿಂದಲೂ ಆತನ ಪರವಾಗಿಯೇ ನಡೆದುಕೊಳ್ಳುತ್ತಿದ್ದಾರೆಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಸದ್ಯ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾನ್ಸ್​​ಟೇಬಲ್ ಪ್ರಸಾದ್​ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Last Updated : Nov 17, 2020, 12:27 PM IST

ABOUT THE AUTHOR

...view details