ಚಾಮರಾಜನಗರ:ತನ್ನ ತಾಯಿಯೊಂದಿಗೆ ನೆರೆಮನೆಯವನ ರಾಸಲೀಲೆ ಕಂಡು ಬೇಸತ್ತು ಹೋಗಿದ್ದ ಮಗ ಕೊನೆಗೂ ಆತನನ್ನು ಕೊಲೆಮಾಡಿರುವ ಘಟನೆ ಜ್ಯೋತಿಗೌಡನಪುರದಲ್ಲಿ ನಡೆದಿದೆ.
ಮರಿಸ್ವಾಮಿ (56) ಹತ. ಮರಿಸ್ವಾಮಿ ತನ್ನ ಎದುರು ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹಲವಾರು ವರ್ಷಗಳಿಂದ ಸಾಗುತ್ತಿದ್ದ ಇವರ ಸಂಬಂಧದ ಬಗ್ಗೆ ಮಹಿಳೆಯ ಮಗ ಮಹಾದೇವಸ್ವಾಮಿಗೆ ತಿಳಿದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾದೇವಸ್ವಾಮಿ ಹಾಗೂ ಮರಿಸ್ವಾಮಿ ನಡುವೆ ಜಗಳವಾಗಿತ್ತು. ಬಳಿಕ ಸಂಧಾನ ಮಾಡಲಾಗಿತ್ತು ಎನ್ನಲಾಗ್ತಿದೆ. ಎಷ್ಟೇ ಗಲಾಟೆಯಾದರೂ ಮರಿಸ್ವಾಮಿ ಆ ಮಹಿಳೆಯೊಂದಿಗೆ ಸಂಬಂಧ ಮುಂದುವರೆಸಿದ್ದ ಎನ್ನಲಾಗಿದೆ. ಇದರಿಂದ ಮಹಾದೇವಸ್ವಾಮಿ ರೊಚ್ಚಿಗೆದ್ದು, ಮತ್ತೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಇದು ಅತಿರೇಕಕ್ಕೆ ಹೋಗಿ ಮರಿಸ್ವಾಮಿ ತಲೆಗೆ ಮಹಾದೇವಸ್ವಾಮಿ ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಈ ಘಟನೆ ಪೊಲೀಸರಿಗೆ ತಿಳಿದಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮರಿಸ್ವಾಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಈ ಘಟನೆ ಕುರಿತು ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಪುಟ್ಟಸ್ವಾಮಿ ಆರೋಪಿ ಮಹಾದೇವಸ್ವಾಮಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.