ಚಾಮರಾಜನಗರ:ವಿವಾಹೇತರ ಸಂಬಂಧ ಬೆಳಕಿಗೆ ಬಂದಿದ್ದರಿಂದ ಜೋಡಿಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುಂಡ್ಲುಪೇಟೆಯ ಲಾಡ್ಜ್ವೊಂದರಲ್ಲಿ ನಡೆದಿದೆ.
ವಿವಾಹೇತರ ಸಂಬಂಧ ಗುಟ್ಟು ರಟ್ಟು: ಮಹಿಳೆ, ಯುವಕ ಆತ್ಮಹತ್ಯೆಗೆ ಯತ್ನ - ಆತ್ಮಹತ್ಯೆಗೆ ಯತ್ನ
ವಿವಾಹೇತರ ಸಂಬಂಧ ಬೆಳಕಿಗೆ ಬಂದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಜೋಡಿ - ಗುಂಡ್ಲುಪೇಟೆಯ ಲಾಡ್ಜ್ವೊಂದರಲ್ಲಿ ಘಟನೆ.
ಚಾಮರಾಜನಗರ
ಮೈಸೂರು ಜಿಲ್ಲೆಯ ಮಧ್ಯ ವಯಸ್ಕ ಮಹಿಳೆ ಹಾಗೂ ಯುವಕ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಗುಂಡ್ಲುಪೇಟೆ ಲಾಡ್ಜ್ಗೆ ಶುಕ್ರವಾರ ಬೆಳಗ್ಗೆ ಇವರು ಬಂದು ವಾಸ್ತವ್ಯ ಹೂಡಿದ್ದು, ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.