ಚಾಮರಾಜನಗರ :ಪರಪುರುಷನೊಟ್ಟಿಗೆ ಪತ್ನಿ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದನ್ನು ಕಂಡು ಪತ್ನಿಯನ್ನು ಕೊಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾದಲವಾಡಿ ಸಮೀಪದ ಬೇಲದಕುಪ್ಪೆ ಎಂಬಲ್ಲಿ ನಡೆದಿದೆ. ಮಹಾದೇವಪ್ಪ(52) ಎಂಬಾತ ತನ್ನ ಪತ್ನಿ ಮಹದೇವಮ್ಮ(45) ಎಂಬಾಕೆಯನ್ನು ಮಚ್ಚಿನಿಂದ ಕೊಂದು ಠಾಣೆಗೆ ಬಂದು ಶರಣಾಗಿದ್ದಾನೆ.
ಪತ್ನಿಗೆ ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದರೂ ಪತ್ನಿ ಆ ಪರಪುರುಷನ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಡೇರಿಗೆ ಹಾಲು ಹಾಕಿ ಹಿಂತಿರುಗುವಾಗ ಸ್ನಾನದ ಮನೆಯಲ್ಲಿ ರಾಸಲೀಲೆಯನ್ನು ಕಂಡು ಮಚ್ಚಿನಿಂದ ಹೊಡೆದಿದ್ದರಿಂದ ಮಹಾದೇವಮ್ಮ ಸ್ಥಳದಲ್ಲೇ ಅಸುನೀಗಿದ್ದಾರೆ ಎನ್ನಲಾಗಿದೆ.