ಚಾಮರಾಜನಗರ: ಹಳ್ಳವೊಂದರ ಪೈಪ್ನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ಗ್ರಾಮದ ಸಮೀಪ ನಡೆದಿದೆ. ಅಕ್ರಮ ಗಣಿಗಾರಿಕೆ ನಡೆಸುವವರು ಇಲ್ಲವೇ ಬೇಟೆಯಾಡುವವರು ಈ ಸ್ಫೋಟಕ ವಸ್ತುಗಳನ್ನು ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 120 ಜಿಲಿಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡು ಭದ್ರವಾಗಿಡಲಾಗಿದೆ.
ನೀರಿನ ಪೈಪ್ನಲ್ಲಿ ಸ್ಫೋಟಕಗಳು ಪತ್ತೆ.. ಅಕ್ರಮ ಗಣಿಗಾರಿಕೆ ಉದ್ದೇಶ ಶಂಕೆ..! - ಚಾಮರಾಜನಗರದ ಹಳ್ಳವೊಂದರ ನೀರಿನ ಪೈಪ್ನಲ್ಲಿ ಸ್ಫೋಟಕಗಳು ಪತ್ತೆ,
ಹಳ್ಳವೊಂದರ ನೀರಿನ ಪೈಪ್ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಅಕ್ರಮ ಗಣಿಗಾರಿಕೆ ನಡೆಸುವ ಸಲುವಾಗಿ ಸಂಗ್ರಹಣೆ ಮಾಡಿರಬಹುದೆಂದು ಚಾಮರಾಜನಗರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಳ್ಳವೊಂದರ ನೀರಿನ ಪೈಪಲ್ಲಿ ಸ್ಫೋಟಕಗಳು ಪತ್ತೆ
ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿ ತಯಾರಿಸಿರುವ ಸ್ಫೋಟಕ ಇದಾಗಿದ್ದು, ಅಕ್ರಮವಾಗಿ ಗಣಿಗಾರಿಕೆ ನಡೆಸಲು ಇಲ್ಲವೇ ಅಂತಹವರಿಗೆ ಮಾರಾಟ ಮಾಡಲು ತಂದಿಟ್ಟರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.