ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಕೊಡ್ತಾರಾ ಚಾಮರಾಜನಗರಕ್ಕೆ ಮಿಠಾಯಿ.. ರಾಜ್ಯ ಬಜೆಟ್​​ ಮೇಲೆ ಜನರ ನಿರೀಕ್ಷೆಗಳೇನು? - ಕರ್ನಾಟಕ ಬಜೆಟ್​ 2022

2022ರ ಬಜೆಟ್​​ನಲ್ಲಿ ಸಿಎಂ ಬೊಮ್ಮಾಯಿ ಅವರು ಮೂಗಿಗೆ ತುಪ್ಪ ಸವರದೇ ಮಿಠಾಯಿ ಕೊಟ್ಟೇ ಕೊಡುತ್ತಾರೆಂಬ ಲೆಕ್ಕಾಚಾರ ಚಾಮರಾಜನಗರದ ಜನರು ಮತ್ತು ಜನಪ್ರತಿನಿಧಿಗಳಾದ್ದಾಗಿದೆ..

expectations-of-chamarajanagar-people-on-cm-bommai-maiden-budget
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ 2022

By

Published : Feb 19, 2022, 4:22 PM IST

ಚಾಮರಾಜನಗರ : 2022ರಚುನಾವಣಾ ವರ್ಷದ ಬಜೆಟ್ ಹಾಗೂ ಸರ್ಕಾರವು ಮಂಡಿಸಲಿರುವ ಪೂರ್ಣವಾಧಿಯ ಕೊನೆಯ ಬಜೆಟ್ ಇದಾಗಿದೆ. ತಮಗೆ ರಾಜ್ಯದ ಎಲ್ಲಾ ಜಿಲ್ಲೆಗಳೂ ಒಂದೇ ಎಂದು ಸಿಮ್ಸ್ ಕಾರ್ಯಕ್ರಮದಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಾದರೂ ಗಡಿಜಿಲ್ಲೆಗೆ ಮಿಠಾಯಿ ಸಿಗಲಿದೆಯಾ ಎಂಬ ನಿರೀಕ್ಷೆ ಗರಿಗೆದರಿದೆ.

ಕೈ-ದಳ ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಕಾರ್ಯಕ್ರಮಗಳು ಹಾಗೂ ಕಳೆದ ಬಾರಿ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಮಂಡಿಸಿದ್ದ ಹೊಸ ಯೋಜನೆಗಳು ಪುಸ್ತಕದಲ್ಲೇ ಉಳಿದಿವೆ. ಆ ಕಾರ್ಯಕ್ರಮಗಳು ವರ್ಷಗಳುರುಳಿದರೂ ಜಾರಿಯಾಗದ ಅಸಮಾಧಾನ ಎಲ್ಲರಲ್ಲಿದೆ.

ಈ ಬಾರಿಯಾದರೂ ಬೊಮ್ಮಾಯಿ ಅವರು ಮೂಗಿಗೆ ತುಪ್ಪ ಸವರದೇ ಮಿಠಾಯಿ ಕೊಟ್ಟೇ ಕೊಡುತ್ತಾರೆಂಬ ಲೆಕ್ಕಾಚಾರ ಚಾಮರಾಜನಗರದ ಜನರು ಮತ್ತು ಜನಪ್ರತಿನಿಧಿಗಳಾದ್ದಾಗಿದೆ.

ಗಗನಚುಕ್ಕಿ-ಭರಚುಕ್ಕಿ ಜಲಪಾತ

ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದ ಸಂತೇಮರಹಳ್ಳಿ ಮಾರುಕಟ್ಟೆ ಮತ್ತು ಕಾರ್ಖಾನೆ ಆಧುನೀಕರಣ, ಯುವಕರಿಗೆ ತರಬೇತಿ, ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನಶ್ಚೇತನ, ಗಗನಚುಕ್ಕಿ-ಭರಚುಕ್ಕಿ ಪ್ರವಾಸಿ ಕೇಂದ್ರ ಅಭಿವೃದ್ಧಿ ನೆಪಮಾತ್ರಕ್ಕೆ ಆಗಿದೆ.

ಬಿಎಸ್​ವೈ ಆಯವ್ಯಯದಲ್ಲಿ ಮಂಡಿಸಿದ್ದ ಚಾಮರಾಜನಗರ ತಾಲೂಕಿನ ಬೂದಿಪಡಗದಲ್ಲಿ ಆನೆ ಶಿಬಿರ, ಹನೂರು ತಾಲೂಕಿನ ಗೋಪಿನಾಥಂನಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ, ಖಾಸಗಿ ಸಹಭಾಗಿತ್ವದಲ್ಲಿ ಚಾಮರಾಜನಗರ ಅರಿಶಿಣ ಮಾರುಕಟ್ಟೆ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳು ಕೂಡ ಇನ್ನೂ ಪುಸ್ತಕದಲ್ಲೇ ಇವೆ.

ಚಾಮರಾಜನಗರ ರೈಲ್ವೆ ನಿಲ್ದಾಣ

ಇದನ್ನೂ ಓದಿ:ನಾವು ಜನರಿಗೆ ಮೋಸ ಮಾಡುತ್ತಿದ್ದೇವೆ.. ಕಾಂಗ್ರೆಸ್​ ಧರಣಿಗೆ ಬಸವರಾಜ ಹೊರಟ್ಟಿ ಅಸಮಾಧಾನ

ಈ ಬಾರಿ ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿ ವಿ. ಸೋಮಣ್ಣ ಬಂದಿರುವುದರಿಂದ ಹೊಸ ಯೋಜನೆಗಳು, ಅನುದಾನ ಚಾಮರಾಜನಗರಕ್ಕೆ ಹರಿದು ಬರಲಿದೆ ಎಂಬುದು ಬಹುತೇಕ ಜನರ ನಿರೀಕ್ಷೆಯಾಗಿದೆ. ಜಿಲ್ಲೆಯ ಜನರ ಪ್ರಮುಖ ನಿರೀಕ್ಷೆಗಳು ಈ ಕೆಳಗಿನಂತಿವೆ.

  1. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವುದರಿಂದ ವಿಶೇಷ ಪ್ಯಾಕೇಜ್ ಘೋಷಿಸಿದರೇ ಉದ್ಯೋಗ ಸೃಷ್ಟಿ, ಆದಾಯಕ್ಕೂ ಮೂಲ
  2. ಜಿಲ್ಲೆಯ ಕರಿಕಲ್ಲುಗಳು ಉತ್ಕೃಷ್ಟ ಗುಣಮಟ್ಟ ಹೊಂದಿರುವುದರಿಂದ ಗ್ರಾನೈಟ್ ಪಾರ್ಕ್ ನಿರ್ಮಾಣ, ಯುವಕರಿಗೆ ಕೌಶಲ್ಯ ತರಬೇತಿ ಕೊಡಲು ಉತ್ತೇಜನ
  3. ಕಾವೇರಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಯಾಗಬೇಕು
  4. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ
  5. ರೇಷ್ಮೆಗೆ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು
  6. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಹೊಸ ಯೋಜನೆ
  7. ಕೃಷಿ ಉತ್ಪನ್ನಗಳ ದಾಸ್ತಾನಿಗಾಗಿ ಕೋಲ್ಡ್ ಸ್ಟೋರೆಜ್, ಟ್ರಕ್ ಟರ್ಮಿನಲ್ ನಿರ್ಮಾಣ
  8. ಈಗಾಗಲೇ ಮಂಜೂರಾಗಿರುವ ಕಾನೂನು ಕಾಲೇಜನ್ನು ಪ್ರಾರಂಭಿಸಬೇಕು‌. ಜೊತೆಗೆ, ಪ್ರತ್ಯೇಕ ವಿವಿ ಸ್ಥಾಪನೆ
  9. ಹೊಸ ತಾಲೂಕಾದ ಹನೂರಿನಲ್ಲಿ ತಾಲೂಕು ಸೌಧ, ನ್ಯಾಯಾಲಯ ಕಟ್ಟಡ ನಿರ್ಮಾಣ
  10. ತಾಲೂಕು ಆಸ್ಪತ್ರೆಗಳನ್ನು ಏರಿಸುವುದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ

ABOUT THE AUTHOR

...view details