ಕರ್ನಾಟಕ

karnataka

ETV Bharat / state

ನವರಾತ್ರಿ ಗೊಂಬೆಗಳಿಂದ ಸಹಬಾಳ್ವೆ ಸಂದೇಶ.. ಗುಂಡ್ಲುಪೇಟೆಯ ಈ ಮನೆ 10 ಸಾವಿರ ಬೊಂಬೆ ಅರಮನೆ - mysore dasara dolls exhibition

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಿ.ಆರ್. ಸುಬ್ಬರಾವ್ ಎಂಬುವರ ಮನೆಯಲ್ಲಿ ದಸರಾ ಪ್ರಯುಕ್ತ ಹತ್ತು ಸಾವಿರಕ್ಕೂ ಹೆಚ್ಚು ಪ್ರಾಚೀನ ಹಾಗೂ ಆಧುನಿಕ ಮಿನಿಯೇಚರ್ ಬೊಂಬೆ ಪ್ರದರ್ಶನ ನಡೆಯುತ್ತಿದೆ.

dolls exhibition
10 ಸಾವಿರ ಬೊಂಬೆಗಳ ಪ್ರದರ್ಶನ

By

Published : Oct 3, 2022, 1:58 PM IST

ಚಾಮರಾಜನಗರ: ನವರಾತ್ರಿ ದಿನಗಳಂದು ಈ ಮನೆಗಳನ್ನ ಪ್ರವೇಶಿಸಿದ್ರೆ ಸಾಕು ಎಲ್ಲಿ ನೋಡಿದರಲ್ಲಿ ಕಣ್ಮನ ಸೆಳೆಯುವ ಗೊಂಬೆಗಳದ್ದೇ ಕಾರುಬಾರು. ನೋಡುಗರ ಮನ ಸೆಳೆಯುವ ಜೊತೆಗೆ ಒಂದಕ್ಕಿಂತ ಒಂದು ಭಿನ್ನ.. ವಿಭಿನ್ನ.

ಹೌದು, ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಿ.ಆರ್. ಸುಬ್ಬರಾವ್ ಎಂಬುವರ ಮನೆಯಲ್ಲಿ ದಸರಾ ಪ್ರಯುಕ್ತ ಹತ್ತು ಸಾವಿರಕ್ಕೂ ಹೆಚ್ಚು ಪ್ರಾಚೀನ ಹಾಗೂ ಆಧುನಿಕ ಮಿನಿಯೇಚರ್ ಬೊಂಬೆ ಪ್ರದರ್ಶನ ನಡೆಯುತ್ತಿದೆ. ಕಳೆದ 85 ವರ್ಷಗಳಿಂದ ಇವರ ಮನೆಯಲ್ಲಿ ಗೊಂಬೆ ಕೂರಿಸಲಾಗುತ್ತಿದ್ದು, ಪ್ರತಿ ವರ್ಷವು ಒಂದು ವಿಶೇಷ ಪರಿಕಲ್ಪನೆಯೊಂದಿಗೆ ಗೊಂಬೆಗಳ ವೈಭವ ರೂಪ ತಾಳುತ್ತದೆ.

ಗುಂಡ್ಲುಪೇಟೆಯಲ್ಲಿ 10 ಸಾವಿರ ಬೊಂಬೆಗಳ ಪ್ರದರ್ಶನ

ಮಿನಿಯೇಚರ್​ಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಿರುವ ಸುಬ್ಬರಾವ್​ ಹಾಗೂ ಉಮಾರಾವ್ ದಂಪತಿ ಗೊಂಬೆಗಳನ್ನು ವೀಕ್ಷಿಸಲು ಬರುವವರಿಗೆ ಅತಿಥಿ ಸತ್ಕಾರ ಮಾಡುವ ಜೊತೆಗೆ ನವರಾತ್ರಿ ಗೊಂಬೆಗಳ ವೈಶಿಷ್ಟ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಪ್ರತಿ ವರ್ಷ ನವರಾತ್ರಿ ಉತ್ಸವದಂದು ಹತ್ತು ದಿನಗಳ ಕಾಲ ಬೊಂಬೆ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಈ ಬಾರಿ ಮೈಸೂರು ಮಹಾರಾಜರು, ನವದುರ್ಗೆಯರು, ಅಷ್ಟ ಲಕ್ಷ್ಮಿಯರು, ಚಾಮುಂಡಿ ಬೆಟ್ಟ, ತಿರುಪತಿ ಬೆಟ್ಟ ಕೃಷಿ ಯಾಂತ್ರೀಕರಣ, ಗಾಣದಿಂದ ಎಣ್ಣೆ ತೆಗೆಯುವುದು ಹಾಗೂ ಸಹಬಾಳ್ವೆ ಜೀವನದ ಕುರಿತು ಮಾಡಿರುವ ಪರಿಕಲ್ಪನೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ನವರಾತ್ರಿ ಸಂಭ್ರಮ.. ಆಕರ್ಷಕ ದಸರಾ ಗೊಂಬೆಗಳ ಪ್ರದರ್ಶನ

ಒಟ್ಟಿನಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಗತವೈಭವವನ್ನು ಸಾರುವ ಬೊಂಬೆಗಳ ಪ್ರದರ್ಶನವನ್ನ ಸುಬ್ಬರಾವ್ ದಂಪತಿ ಪ್ರತಿ ವರ್ಷ ಏರ್ಪಡಿಸುತ್ತಿರುವುದು ಮೈಸೂರು ದಸರೆಯ ಬಗ್ಗೆ ಅವರಿಗಿರುವ ವಿಶಿಷ್ಟ ಪ್ರೀತಿ, ಬದ್ಧತೆಯನ್ನು ತೋರುತ್ತಿದೆ. ಇವರ ಈ ಕಾರ್ಯ ಹೀಗೆ ಮುಂದುವರೆಯಲೆಂದು ಆಶಿಸೋಣ.

ABOUT THE AUTHOR

...view details